ಈಸಿ ಬ್ರೆಡ್ ಸ್ಪೆಷಲ್

ಬೇಕಾಗುವ ಪದಾರ್ಥಗಳು:
ಈರುಳ್ಳಿ – ೩
ದಪ್ಪಮೆಣಸಿನಕಾಯಿ – ೨
ಟೊಮೊಟೊ – ೪
ಹಸಿಮೆಣಸಿನಕಾಯಿ – ೫ – ೬
ತುಪ್ಪ – ಸ್ವಲ್ಪ
ಬ್ರೆಡ್ (ಸಾಲ್ಟಿ ಟೇಸ್ಟ್) – ೧೦ – ೧೨
ಕೊತ್ತಂಬರಿಸೊಪ್ಪು – ಸ್ವಲ್ಪ
ಎಣ್ಣೆ – ಸ್ವಲ್ಪ

ವಿಧಾನ: ಗಾಲಿಗಾಲಿ ಆಕಾರದಲ್ಲಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಟೊಮೊಟೊ ಮತ್ತು ಹಸಿಮೆಣಸಿನಕಾಯಿ ಇವುಗಳನ್ನು ಎಣ್ಣೆ ಹಾಕಿದ ಪ್ಯಾನ್‌ನಲ್ಲಿ ಫ್ರೈ ಮಾಡಬೇಕು. ತುಪ್ಪ ಸವರಿದ ಬ್ರೆಡ್‌ಗಳನ್ನು ಎರಡೂ ಕಡೆಯೂ ತವಾ ಮೇಲೆ ರೋಸ್ಟ್ ಮಾಡಬೇಕು. ನಂತರ ಈ ಬ್ರೆಡ್ ಮೇಲೆ ಫ್ರೈ ಮಾಡಿದ ಈರುಳ್ಳಿ, ಕ್ಯಾಪ್ಸಿಕಮ್, ಟೊಮೊಟೊ, ಹಸಿಮೆಣಸಿನಕಾಯಿ ಇವುಗಳನ್ನು ಪದರಪದರವಾಗಿ ಹಾಕಿ ಕೊತ್ತಂಬರಿಸೊಪ್ಪು ಉದುರಿಸಿ ಮೇಲೆ ಬ್ರೆಡ್ ಇಟ್ಟು ಸೇವಿಸಬಹುದು.