ಈಶ್ವರ ಮಂಟೂರ ಅಗಲಿಕೆಗೆ ಬಸವೇಶ್ವರ ಸಮಾಜ ಸೇವಾ ಬಳಗ ಸಂತಾಪ

ಕಲಬುರಗಿ,ಡಿ.09: ಶರಣ ತತ್ವದ ಅಪ್ಪಟ ಅನುಯಾಯಿ, ನಾಡಿನ ಖ್ಯಾತ ಪ್ರವಚನಕಾರ ಶರಣ ಈಶ್ವರ ಮಂಟೂರ ಅವರು ಗುರುವಾರ ಲಿಂಗೈಕ್ಯರಾಗಿದ್ದಾರೆ.
ಅವರ ಅಗಲಿಕೆ ತುಂಬಾ ವಿಷಾದನೀಯ, ಶರಣ ತತ್ವ ಮತ್ತು ನಾಡಿಗೆ ನಷ್ಟವಾಗಿದೆ ಎಂದು ‘ಬಸವೇಶ್ವರ ಸಮಾಜ ಸೇವಾ ಬಳಗ’ ಸಂತಾಪ ಮಿಡಿದಿದೆ ಎಂದು ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ತಿಳಿಸಿದ್ದಾರೆ.