ಈಶ್ವರ ಖಂಡ್ರೆಯವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ಬೀದರ:ಮೇ.23:ಭಾಲ್ಕಿ ಕ್ಷೇತ್ರದ ಹಿರಿಯ ಶಾಸಕರಾಗಿ ವಿಧಾನಸಭೆಗೆ ನಾಲ್ಕನೇ ಬಾರಿಗೆ ಪ್ರಚಂಡ ಬಹುಮತದಿಂದ 27,000 ಕ್ಕೂ ಅಧಿಕ ಮತಗಳ ಅಂತರದಿಂದ ಚುನಾಯಿತರಾದ ಮಾಜಿ ಸಚಿವ ಹಾಲಿ ಏಐಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಭೀಮಣ್ಣಾ ಖಂಡ್ರೆಯವರಿಗೆ ಸಚಿವರನ್ನಾಗಿ ಮಾಡಬೇಕೆಂದು ಖ್ಯಾತ ಮಕ್ಕಳ ರೋಗ ತಜ್ಞರು ಹಾಗೂ ಖಾಸಗಿ ವೈದ್ಯಕೀಯ ಮತ್ತು ನಸಿರ್ಂಗ್ ಹೋಮ್ ಕೆ. ಪಿ. ಎಮ್. ಇ. ಅಧ್ಯಕ್ಷರಾದ ಡಾ. ಸಿ. ಆನಂದರಾವ್ ರವರು ಮುಖ್ಯ ಮಂತ್ರಿ ಗಳಾದ ಸಿದ್ದರಾಮಯ್ಯ ನವರಿಗೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ, ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ, ಸಿದ್ಧಾರೆಡ್ಡಿ ನಾಗೂರಾ, ಜಗನ್ನಾಥ ರೆಡ್ಡಿ ನಿರ್ಣಾ, ಲಕ್ಕಿ ಪ್ರಥ್ವಿರಾಜ್, ಸಹಜಾನಂದ ಕಂದಗೂಳ, ಡಾ. ಚಂದ್ರಕಾಂತ ಗುದಗೆ, ವಿಜಯ ಬಲ್ಲೂರಕರ, ಡಾ. ಎಮ್. ಎ. ಶೇರಿಕಾರ್, ವಿಜಯ ಬಲ್ಲೂರ, ಅಶೋಕಕುಮಾರ ನಾಗುರೆ, ಡಾ. ಶಿವಕುಮಾರ, ಅಶೋಕರೆಡ್ಡಿ, ವೈಜಿನಾಥ ನಿಡೋದಾ ಮುಂತಾದವರು ಒತ್ತಾಯಿಸಿದ್ದಾರೆ.