ಈಶ್ವರ ಖಂಡ್ರೆಯವರಿಗೆ ಡಿಸಿಎಂ ಮಾಡದಿದ್ದರೆ ವೀರಶೈವ ಲಿಂಗಾಯತರ ಹೋರಾಟದ ಎಚ್ಚರಿಕೆ

ಬೀದರ, ಮೆ-23, ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಐ ಪಕ್ಷಕ್ಕೆ ನಿಚ್ಚಳ ಬಹುಮತ ಪಡೆದು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಲು ಲಿಂಗಾಯತರು 39 ಶಾಸಕರನ್ನು ಗೆಲ್ಲಿಸಿರುವುದು ಕಾರಣವಾಗಿದೆ. ಸರ್ವರನ್ನು ಸಮಾನವಾಗಿ ತೆಗೆದುಕೊಂಡು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಜಗನ್ನಾಥ ಕರಂಜಿ ಅವರು, ಅನುಭವವುಳ್ಳ ಬುದ್ದಿಮತ್ತೆಯ ವ್ಯಕ್ತಿ ಈಶ್ವರ ಖಂಡ್ರೆಯವರಿಗೆ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಧ್ಯಕ್ಷರಿಗೆ ಮತ್ತು ಸಿ.ಎಂ. ಅವರಿಗೆ ಮನವಿ ಮಾಡಿದಾದ್ದಾರೆ.
ದಿ. ರಾಜೀವ ಗಾಂಧಿ ಹೇಳಿರುವಂತೆ ‘ಜಿಸಕಿ ಜಿತನಿ ಸಂಖ್ಯೆ ಭಾರಿ, ಉಸಕಿ ಉನಕಿ ಭಾಗಿದಾರಿ’ ಎಂಬ ವಾಣಿ ಪಾಲಿಸಿ ನ್ಯಾಯ ಕೊಡಬೇಕು ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ, ತೆಲಾಂಗಣ ಗಡಿಭಾಗ, ಮಹಾರಾಷ್ಟ್ರ ಗಡಿಭಾಗ ಸೇರಿ ಸುಮಾರು 45 ಸ್ಥಾನಗಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಮನಗಾಣಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಅವರು, ಭರ್ಜರಿ ಜಯಗಳಿಸಿದ ಕಾಂಗ್ರೆಸ್‍ಗೆ ಲಿಂಗಾಯತರ ಕೊಡುಗೆ ಅಪಾರವಾಗಿದೆ. ಮಂತ್ರಿ ಮಂಡಳದ ಮೊದಲನೆ ಹಂತದಲ್ಲೇ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ದೊರಕದಿರುವುದು ಅನ್ಯಾಯವಾಗಿದೆ. ಎರಡನೆ ಪಟ್ಟಿಯಲ್ಲಿ ಈಶ್ವರ ಖಂಡ್ರೆಯವರು ಮಹಾಸಭಾದ ಪ್ರಧಾನ ಕಾರ್ಯದಶಿಯಾಗಿ, ಕೆಪಿಸಿಸಿಐ ಕಾರ್ಯದರ್ಶಿಯಾಗಿ ಸಚಿವರಾಗಿ ಮಾಡಿದ ಸೇವೆಗೆ ಪರಿಗಣಿಸಿ ಡಿಸಿಎಂ ಸ್ಥಾನ ನೀಡಬೇಕೆಂದರು.
ಬಸªಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಅತಿ ದೊಡ್ಡ ಸಮುದಾಯ ಲಿಂಗಾಯತರಿಗೆ ಅವಮಾನ ಮಾಡಿದ ಬಿಜೆಪಿ ತಕ್ಕ ಬೆಲೆ ತೆತ್ತಿದೆ. ಇದನ್ನರಿತು ಕಾಂಗ್ರೆಸ್ ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ನೀಡಿ ಈಶ್ವರ ಖಂಡ್ರೆಯವರಿಗೆ ಸಿಎಂ. ಸ್ಥಾನ ನೀಡಬೇಕಿತ್ತು. ನೀಡಿಲ್ಲ. ಈಗ ಡಿಸಿಎಂ ಮತ್ತು ಇತರ 8 ಜನರಿಗೆ ಸಚಿವ ಸಂಪುಟದಲ್ಲಿ ಸ್ಥಾನಗಳು ನೀಡಬೇಕೆಂದರು.
ಶಿವಯ್ಯ ಸ್ವಾಮಿ ಕಮಠಾಣಾ ಅವರು ಮಾತನಾಡಿ, ಸೂಕ್ತ ಪ್ರಾತಿನಿಧ್ಯ ನೀಡುವಂತೆ ಎಐಸಿಸಿ ಅಧ್ಯಕ್ಷರಿಗೆ, ಸಂಬಂಧಿತರಿಗೆ ನಿಯೋಗ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು. ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಗಂಗಶೆಟ್ಟಿ ಪಾಟೀಲ ವಕೀಲರು ಮಾತನಾಡಿ, ನ್ಯಾಯ ಕೊಡದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಗನ್ನಾಥ ಕರಂಜಿ. ಮಹೇಶ ಶಿವಕುಮಾರ ಪಾಟೀಲ ವಕೀಲರು, ಬಾಬುರಾವ ದೇಶಮುಖ ವಕೀಲರು, ಶಿವಕುಮಾರ ಪಾಟೀಲ ತೇಗಂಪುರ, ಬಸವರಾಜ ನಿಟ್ಟೂರ, ಜ್ಯೋತಿಸ್ ಹಲಬುರಗೆ, ಸತೀಶ ದೇಶಮುಖ, ರಾಜಕುಮಾರ ನಾಯಕೊಡೆ, ಶಿವಕುಮಾರ, ಸಂತೋಷ ಪೆÇೀಲಿಸ್ ಪಾಟೀಲ, ತಾ. ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಭಾ ತೇಗಂಪುರ, ಪವನ ಬಿರದಾರ ಕಾದಲಾಬಾದ, ಓಂಕಾರ ಪಾಟೀಲ, ಶಿವರಾಜ ಬಾಳೂರೆ, ರೇವಣಪ್ಪ ಪಾಟೀಲ, ಸಂಗಮೆಶ ಮೂಲಗೆ, ಶಿವರಾಜ ಬಲ್ಲೂರೆ, ಬಸವರಾಜ ಕಾಶೆಪ್ಪನೋರ, ಬಾಪುರಾವ ದೇಶಮುಖ ಅವರುಗಳು ಉಪಸ್ಥಿತರಿದ್ದರು.