
ಭಾಲ್ಕಿ:ಮೇ.17: ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರು ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆಯವರಿಗೆ ಉಪಮುಖ್ಯಮಂತ್ರಿಸ್ಥಾನ ನೀಡಬೇಕು ಎಂದು ವಿವಿಧಪರ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಕ್ಕೊತ್ತಾಯ ಮಾಡಿದ್ದಾರೆ.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಷತ್ತು, ಕಸಾಪ, ಚುಸಾಪ, ಜಾಸಾಪ, ನಿವೃತ್ತ ನೌಕರರ ಸಂಘ, ಕದಳಿ ವೇದಿಕೆ ಸಂಘ, ಚನ್ನಬಸವಾಶ್ರಮ ಸಂಚಾಲಕರ ಸಂಘ ಸೇರಿದಂತೆ ವಿವಿಧಪರ ಸಂಘಟನೆಯ ಪದಾಧಿಕಾರಿಗಳು ಸಭೆ ಸೇರಿ ಕ್ಷೇತ್ರದ ಶಾಸಕರಿಗೆ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಮಾಡಬೇಕು. ತಪ್ಪಿದ್ದಲ್ಲಿ ಉಪಮುಖ್ಯಮಂತ್ರಿಯನ್ನಾದರೂ ಮಾಡಲೇಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು. ಇದೇವೇಳೆ ಮಾತನಾಡಿದ ವಿವಿಧ ಪರ ಸಂಘಟನೆಯ ಪದಾಧಿಕಾರಿಗಳು, ಈಶ್ವರ ಖಂಡ್ರೆಯವರು ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮುತ್ಸದ್ದಿ ನಾಯಕರಿದ್ದಾರೆ. ಇಂತಹ ವ್ಯಕ್ತಿಗೆ ಮುಖ್ಯ ಮಂತ್ರಿ ಅಥವಾ ಉಪಮುಖ್ಯಮಂತ್ರಿ ಮಾಡುವುದರಿಂದ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಕಾರಣ ಅವರ ಎಲ್ಲಾ ಉತ್ತಮ ಗುಣಗಳನ್ನು ಪರಿಗಣಿಸಿ ಅವರಿಗೆ ಮುಖ್ಯ ಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಾಶಿನಾಥ ಭೂರೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮರೆ, ಸಾವಿತ್ರಿ ಪಾಟೀಲ, ಅನಿತಾ ಪಾಟೀಲ, ಕದಳಿ ವೇದಿಕೆಯ ಮಲ್ಲಮ್ಮಾ ನಾಗನಕೇರೆ, ಚನ್ನಬಸವಾಶ್ರಮ ಸಂಚಾಲಕ ವಿಶ್ವನಾಥಪ್ಪ ಜೆಇ, ಹಚ್ಚೆ ಶರಣರು, ವೀರಣ್ಣಾ ಕುಂಬಾರ, ವೈಜಿನಾಥಪ್ಪ ದಾಬಶೆಟ್ಟೆ ಹಾಜರಿದ್ದು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು.