ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ

ಬೀದರ,ಮೇ 15: ಭಾಲ್ಕಿ ಮತಕ್ಷೇತ್ರದಿಂದ ಸತತವಾಗಿಗೆಲ್ಲುತ್ತಬರುತ್ತಿರುವ ಅ.ಭಾ ವೀರಶೈವ ಲಿಂಗಾಯತ ಮಹಾಸಭೆಯರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ
ಮಾಡಬೇಕೆಂದು ಬೇಮಳೇಖೇಡ, ಗೋರಟಾ, ಬೀದರ
ಮಠದ ಡಾ. ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದ್ದಾರೆ.
ಈಶ್ವರ ಖಂಡ್ರೆಯವರುಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಪಕ್ಷದ ಬಲ ಸಂವರ್ಧನೆಯಲ್ಲಿ ಶಕ್ತಿ ಮೀರಿ
ದುಡಿಯುತ್ತಿರುವ ರಾಜಕಾರಣಿಯಾಗಿದ್ದಾರೆ. ಶಿಕ್ಷಣ, ಕೃಷಿ,
ನೀರಾವರಿ, ರಸ್ತೆ, ಸಾರಿಗೆ, ಕೈಗಾರಿಕೆ, ಉದ್ಯೊಗ ಮುಂತಾದ
ಕ್ಷೇತ್ರದಲ್ಲಿ ಅಪೂರ್ವ ಪ್ರಗತಿ ಸಾಧಿಸಿದ ಈಶ್ವರಖಂಡ್ರೆಯವರು ಭಾಲ್ಕಿ ಮತ ಕ್ಷೇತ್ರವನ್ನು ರಾಜ್ಯದಲ್ಲಿಯೇಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡೆಸಿದ ಜನಪರಮುತ್ಸದ್ದಿ ನಾಯಕರಾಗಿ ಎಲ್ಲಾ ವರ್ಗದ ಜನರ ಪ್ರೀತಿ
ವಿಶ್ವಾಸಗಳನ್ನುಗಳಿಸಿರುವರು. ವೀರಶೈವ ಲಿಂಗಾಯತ ಸಮಾಜದ
ಪ್ರಬಲ ಜನನಾಯಕರಾಗಿರುವ ಈಶ್ವರ ಖಂಡ್ರೆಯವರನ್ನು
ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡುವ
ಮುಖಾಂತರ ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ
ನ್ಯಾಯ ಮತ್ತು ಮನ್ನಣೆಯನ್ನು ಕೊಡಬೇಕೆಂದು ಡಾ.ರಾಜಶೇಖರ್ ಶಿವಾಚಾರ್ಯರು ರಾಷ್ಟ್ರ ಮತ್ತು ರಾಜ್ಯ ಕಾಂಗ್ರೇಸ್‍ಪಕ್ಷಕ್ಕೆ ಒತ್ತಾಯಿಸಿದ್ದಾರೆ.