
ಬೀದರ,ಜು.07: ಸಂಕಷ್ಟ ಚತುರ್ಥಿಯ ದಿನ ಬೀದರ ನಗರದಲ್ಲಿರುವ ಪ್ರಸಿದ್ಧ ಕ್ರಾಂತಿ ಗಣೇಶ ದೇವಸ್ಥಾನ ಹತ್ತಿರ ಕೊರೆಯಲಾದ ಬೋರ್‍ವೆಲ್‍ನÀ ಪೂಜೆಯನ್ನು ಭಾರತೀಯ ಜನತಾ ಪಾರ್ಟಿಯ ಈಶ್ವರಸಿಂಗ್ ಠಾಕೂರ್ ಮತ್ತು ಅವರ ಪತ್ನಿಯ ಹಸ್ತದಿಂದ ನೇರವೇರಿಸಲಾಯಿತು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕ್ರಾಂತಿ ಗಣೇಶ ಹತ್ತಿರ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಬೋರ್‍ವೆಲ್‍ನ್ನು ಕೊರೆಯಿಸಿ ಕೊಡುವುದಾಗಿ ಈಶ್ವರಸಿಂಗ್ ಠಾಕೂರ ಅವರು ಭರವಸೆಯನ್ನು ನೀಡಿದರು. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಚುನಾವಣೆಯಲ್ಲಿ ಸೋತರೂ ಕೂಡ ಕ್ರಾಂತಿ ಗಣೇಶ ದೇವಸ್ಥಾನದ ಹತ್ತಿರ ಬೋರ್‍ವೆಲ್‍ನ್ನು ಕೊರೆಯಿಸಿ ಇಂದು ಪೂಜೆಯನ್ನು ನೇರವೆರಿಸಿದರು.
ಇದೇ ಸಂದರ್ಭದಲ್ಲಿ ಕ್ರಾಂತಿ ಗಣೇಶ ಇದ್ದ ಸ್ಥಳದಲ್ಲಿ ಭವ್ಯ ಮಂದಿರವನ್ನು ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೇರವೆರಿಸಿ ಮಾತನಾಡಿದ ಅವರು ಎರಡೂವರೆ ದಶಕದ ಪ್ರಸಿದ್ಧ ದೇವಸ್ಥಾನದ ಸ್ಥಳದಲ್ಲಿ ಭವ್ಯ ಮಂದಿರವನ್ನು ಎಲ್ಲರ ಸಹಯೋಗದಿಂದ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಂದಕಿಶೋರ ವರ್ಮಾ, ಗಾಂಧಿಗಂಜ್ ಬ್ಯಾಂಕಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ಸೋಮಶೇಖರ ಪಾಟೀಲ ಗಾದಗಿ, ಸುಭಾಷ ವಾಘಮಾರೆ, ಬಾಬು ಕಾಮಶೆಟ್ಟಿ, ರಾಚಪ್ಪ ಪೊಲಕಪಳ್ಳಿ, ಮಹೇಶ್ವರ ಸ್ವಾಮಿ, ಮದನ್, ಮೋಹನ ಎಳನೂರಕರ್, ಚಂದ್ರಕಾಂತ ಝಪಾಟೆ, ಬೀದರ ನಗರ ಸಭೆ ಸದಸ್ಯ ಅಭಿ ಕಾಳೆ, ವಿಕ್ರಮ ಮುದಾಳೆ, ಪ್ರಭು ಪಾಟೀಲ ಕುಂಬಾರವಾಡಾ, ಪ್ರದೀಪ ಬೀದರಕರ್, ಲಕ್ಷ್ಮಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕ್ರಾಂತಿ ಗಣೇಶ ಸೇವಾ ಸಮಿತಿ ವತಿಯಿಂದ ಸ್ವಂತ ಖರ್ಚಿನಿಂದ ಬೋರ್‍ವೆಲ್‍ನ್ನು ಕೊರೆಯಿಸಿದಕ್ಕಾಗಿ ಈಶ್ವರಸಿಂಗ್ ಠಾಕೂರ ದಂಪತಿ ಹಾಗೂ ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರಿಗೆ ಸನ್ಮಾನಿಸಲಾಯಿತು ಮತ್ತು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.