ಈಶ್ವರಪ್ಪ ವಿರುದ್ಧ ಆಕ್ರೋಶ; ಗಡಿಪಾರಿಗೆ ಪ್ರತಿಭಟನೆ


ರಾಯಚೂರು, ಮಾ.೧೫- ಅಝನ್ ಮತ್ತು ಅಲ್ಲಾಹುವಿನ ಬಗ್ಗೆ ಅವಹೇಳನ ಹೇಳಿಕೆ ನೀಡಿದ ಕೆ ಎಸ್ ಈಶ್ವರಪ್ಪ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಅವರನ್ನು ಗಡಿಪಾರು ಮಾಡುವಂತೆ ಎಸ್ ಡಿ ಪಿ ಐ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಮುಸ್ಲಿಂ ದೇವರನ್ನು ಅಪಮಾನ ಮಾಡಿದ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೋಮುಗಲಭೆ ಸೃಷ್ಟಿ ಮಾಡುತ್ತಿರುವ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದರು.
ಸರ್ವ ಜನಾಂಗಿಯ ಶಾಂತಿಯ ತೋಟ ಎಂದೇ ಪ್ರಸಿದ್ಧಿ ಪಡೆದಿರುವಂತಹ ರಾಜ್ಯ ವಾಗಿದ್ದು ಈ ರಾಜ್ಯದ ಸೌಹಾರ್ದಾತೆಯನ್ನು ಸಹಿಸದ ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕೆ ಅದರಲ್ಲಿ ವಿಶೇಷವಾಗಿ ಕೆ. ಎಸ್. ಈಶ್ವರಪ್ಪ ಪ್ರತಿ ಭಾರಿ ಮುಸ್ಲಿಮರ ವಿರುದ್ಧ ಹಾಗೂ ಇಸ್ಲಾಮಿನ ವಿರುದ್ಧ ಅವಹೇಳನ ಹೇಳಿಕೆ ಖಂಡಿನೀಯ ಎಂದು ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೇಳಿಕೆ ನೀಡುವದು ಸಾಮಾನ್ಯ ವಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಶ್ರೀರಾಮಸೇನೆ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಲ್ಲಿ ಶ್ರೀರಾಮ್ ಸೇನೆಯ ಕಾರ್ಯಕರ್ತರು ಸಂದರ್ಭ ಬಂದರೆ ದೇಶದ ಸೈನಿಕರಿಕ್ಕಿಂತ ಶೀಘ್ರವಾಗಿ ಕಾರ್ಯಪ್ರೌರಿತ ರಾಗುತ್ತಾರೆ ಎಂದು ದೇಶದ ಸೈನಿಕರ ಬಗ್ಗೆ ಅವಮಾನ ಮಾಡಿದ್ದನು ಹಾಗೂ ಸದರಿ ಕಾರ್ಯಕ್ರಮ ದಲ್ಲಿ ಶ್ರೀ ರಾಮಸೇನೆಯ ಎಲ್ಲಾ ಪದಾಧಿಕಾರಿಗಳಿಗೆ ಮಾರಕಾಸ್ತ್ರಗಳನ್ನು ನೀಡಿ ಪ್ರಚೋದನೆಯ ಭಾಷಣ ಮಾಡಿದ್ದನು. ಮೊನ್ನೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದ ಸಂದರ್ಭದಲ್ಲಿ ಕೂಡ ತಮ್ಮ ಕೊಳಕು ಮನಸ್ಥಿತಿ ಹಾಗೂ ಹರಕು ನಾಲಿಗೆ ಇದ್ದ ಈತನು ಭಾಷಣ ಮಾಡುವಾಗ ಅಝನ್ ಹೇಳುವ ಶಬ್ದ ಬಂದ ತಕ್ಷಣ ಇದನ್ನು ಕೇಳಿ ಇತನು ಅಝನ್ ಹೇಳಿ ಕೇಳಿ ನನಗೆ ತಲೆನೋವು ಆಗ್ತಾ ಇದ ಇದನ್ನು ಬೇಗ ಬಂದ್ ಮಾಡೋಕು ಹಾಗೂ ಅಲ್ಲಾಹ್ ಕೇವಲ ಮೈಕ್ ನಲ್ಲಿ ಅಝನ್ ಕೊಟ್ಟರೆ ಮಾತ್ರ ಕೇಳುತ್ತಾನ ಇಲ್ಲ ಅಂದರೆ ಅಲ್ಲಾಹ್ ಕಿವುಡ ಇದ್ದಾನಾ’ ಎಂದು ಅವಹೇಳನ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಪ್ರಚೋದನಾ ಕಾರಿ ಭಾಷಣ ಮಾಡುತ್ತಿರುವದು ಸರಿಯಲ್ಲ. ಕಾನೂನಿನ ಬಗ್ಗೆ ಸ್ವಲ್ಪ ವಾದರೂ ಗೌರವ ಅಥವಾ ಭಯ ಬೇಡವೇ. ಇದಕ್ಕಿಂತ ಮುಂಚೆ ಕೂಡ ಬಿ ಜೆ ಪಿ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಕಾದರೆ ಮುಸ್ಲಿಮರು ನಮ್ಮ ಪಕ್ಷದ ಕಛೇರಿಯಲ್ಲಿ ಹತ್ತು ವರುಷ ಕಸಗುಡಿಸಬೇಕೆಂದು ಹೇಳಿ ಅವಮಾನ ಮಾಡಿದ್ದ. ಆದರ ಪೊಲೀಸ್ ಅಧಿಕಾರಿಗಳು ಈತನ ವಿರುದ್ಧ ಸುಮೊಟೊ ಕೇಸು ದಾಖಲೀಸಬಹುದಿತ್ತು. ಆದರೆ ಯಾವ ಅಧಿಕಾರಿಗಳು ಕೂಡ ಈತನ ವಿರುದ್ಧ ಕೇಸ್ ಮಾಡುವ ಧೈರ್ಯ ತೋರಲಿಲ್ಲ. ಈತನ ಮೇಲೆ ತಮ್ಮದೇ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬ ಗುತ್ತಿಗೆದಾರನು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗುತ್ತಾನೆ. ಈಶ್ವರಪ್ಪ ನೇ ಈತನ ಆತ್ಮಹತ್ಯೆಗೆ ನೇರ ಹೊಣೆ ಪ್ರಚೋದನ ಮಾಡಿದ್ದನು ಎಂಬ ಸಾಕ್ಷಿಗಳು ಇದ್ದರು ಇಲ್ಲಿಯ ವರೆಗೆ ಯಾವುದೇ ಕ್ರಮ ಜರುಗಿಸಲಿಲ್ಲ. ರಾಜ್ಯದಿಂದ ಗಡಿಪಾರು ಮಾಡಿ ರಾಜ್ಯದ ಶಾಂತಿ ಸುವವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌಸ ಮೋಹಿದ್ದಿನ್, ಸೈಯದ್ ಇಶಾಫ್ ಹುಸೇನ್, ಜಲಾಲ್ ಪಾಷಾ, ಸೈಯದ್ ಇರ್ಫಾನ್ ಸೇರಿದಂತೆ ಉಪಸ್ಥಿತರಿದ್ದರು.