ಈಶ್ವರಪ್ಪ ಪರ ಬ್ಯಾಟ್ ಬೀಸಿದ ಯತ್ನಾಳ್

ವಿಜಯಪುರ,ಏ.2-ಈಶ್ವರಪ್ಪನವರು ಯಡಿಯೂರಪ್ಪನವರ ಸಮಾನಾಂತರ ನಾಯಕ ಎಂದು ಹೇಳುವುದರ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸಚಿವ ಈಶ್ವರಪ್ಪ ಪರವಾಗಿ ನಿಂತಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ ಅವರು, ಅಸಮಾಧಾನ ಆದಾಗಲೇ ಈಶ್ವರಪ್ಪ ಅವರನ್ನು ಕರೆದು ಕಷ್ಟ ಸುಖ ಕೇಳಬೇಕು ಫ್ರೀ ಹ್ಯಾಂಡ್ ಕೊಡಬೇಕು ಅವರು ಸಹ ಸಿನಿಯರ್ ಇದ್ದಾರೆ, ಪಕ್ಷ ಕಟ್ಟಿದ್ದಾರೆ, ಈಶ್ವರಪ್ಪ ಅವರು ಸಹ ಯಡಿಯೂರಪ್ಪನವರ ಸಮಾನಾಂತರ ನಾಯಕರಿದ್ದಾರೆ, ಅವರಿಗೆ ಈ ರೀತಿ ಅವಮಾನ ಮಾಡಿದರೆ ಅಸಮಾಧಾನ ಸ್ಪೋಟವಾಗದೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಇನ್ನೂ ಸ್ಪೋಟವಾಗುತ್ತೇ ಮೇ 2 ರ ಒಳಗೆ ಯಡಿಯೂರಪ್ಪರವನ್ನು ಬದಲಾವಣೆ ಮಾಡದಿದ್ದರೆ ಇನ್ನು ದೊಡ್ಡ ಸ್ಪೋಟವಾಗುತ್ತೇ ಎಂದು ಭವಿಷ್ಯ ನುಡಿದರು.