ಈಶ್ವರಪ್ಪ ಪತ್ರ ಸಮರ: ಪಕ್ಷದ ವೇದಿಕೆಯಲ್ಲೇ ಚರ್ಚೆ:ಸಿಟಿ ರವಿ

ಬೆಂಗಳೂರು, ಏ.5- ಮುಖ್ಯಮಂತ್ರಿ ಬಿಎಸ್.‌ಯಡಿಯೂರಪ್ಪ ವಿರುದ್ದ ಗ್ರಾಮೀಣಾಭಿವೃದ್ಧಿ ಸಚಿಚ ಕೆ .ಎಸ್.ಈಶ್ವರಪ್ಪ ನೀಡಿರುವ ತಮಗೆ ಪತ್ರ ಬರೆದಿರುವುದು ತಮಗೆ ಗೊತ್ತಿಲ್ಲ.‌ಈ ಬಗ್ಗೆ ಫೋನ್ ಮಾಡಿದ್ದರು. ದೂರಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಈಶ್ವರಪ್ತ ದೂರಿನ ಕುರಿತು ಎಲ್ಲಿ ಚರ್ಚಿಸಬೇಕೊ ಅಲ್ಲೇ ಚರ್ಚೆ ಮಾಡುವುದಾಗಿ ತಿಳಿಸಿದರು.
ಪ್ತಶ್ನೆಯೊಂದಕ್ಕೆ‌ಉತ್ತರಿಸಿದ ಅವರು, ವಂಶಪಾರಂಪರ್ಯ ಆಡಳಿತ ನಮ್ಮ ಪಕ್ಷದಲ್ಲಿ ಇಲ್ಲ.
ಕಾಂಗ್ರೆಸ್ ಗೆ ಮಾಲೀಕರು ಅಂದರೆ ನೆಹರು ಕುಟುಂಬ. ಜೆಡಿಎಸ್ ಗೆ ಮಾಲೀಕರು ಅಂದರೆ ದೇವೇಗೌಡರ ಕುಟುಂಬ. ಆದರೆ ರಾಜ್ಯದಲ್ಲಿ‌ ಬಿಜೆಪಿಗೆ ಮಾಲೀಕರು ಅಂದರೆ ಕಾರ್ಯಕರ್ತರ ಕುಟುಂಬ. ಲೀಡರ್ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ. ಆದರೆ ಮಾಲೀಕರು ಅಂದರೆ ಪಕ್ಷದ ಕಾರ್ಯಕರ್ತರು ಮಾತ್ರ ಎಂದರು.
ತಮಿಳುನಾಡಿನಲ್ಲಿ ಅಣ್ಷಾ ಡಿಎಂಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.