ಈಶ್ವರಪ್ಪ ಪತ್ರಕ್ಕೆ ಪ್ರತಿಕ್ರಿಯೆಯಿಲ್ಲ – ಬಿಜೆಪಿ ಗೆಲುವು ನಿಶ್ಚಿತ

ರಾಯಚೂರು.ಏ.೦೨- ಕಾಂಗ್ರೆಸ್ ಪಕ್ಷ ಏನೆ ಅಪಪ್ರಚಾರ ಮಾಡಿದರೂ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಮಾತ್ರ ಪ್ರತಾಪಗೌಡ ಪಾಟೀಲ್ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಅವರು ಹೇಳಿದರು.
ಅವರಿಂದು ಸಂತೆ ಕಲ್ಲೂರು ಗ್ರಾಮದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರತಾಪಗೌಡ ಪಾಟೀಲ್ ಅವರು ಅತಿ ಹೆಚ್ಚಿನ ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಕ್ಷೇತ್ರದಲ್ಲಿ ಅವರು ಗೆದ್ದರೇ, ಸಚಿವರಾಗಲಿದ್ದಾರೆ. ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ದೊಡ್ಡವರು ಕುಳಿತು ಮಾತನಾಡುತ್ತಾರೆ. ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಈ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಚಿವ ಶ್ರೀರಾಮುಲು ಮಾತನಾಡುತ್ತಾ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸಂಬಂಧಿಸಿ ಅವರು ಈಶ್ವರಪ್ಪ ಅವರು ಪತ್ರ ಬರೆದ ಮಾತ್ರಕ್ಕೆ ಸರ್ಕಾರ ವಜಾಗೊಳ್ಳುವುದಿಲ್ಲ. ಇಷ್ಟು ಮಾಹಿತಿ ಹೊಂದಿರಬೇಕಾಗಿತ್ತು. ಎಸ್.ಎಂ.ಕೃಷ್ಣಾ ಅವರ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ ಅವರ ಹಸ್ತಕ್ಷೇಪ ತೀವ್ರವಾಗಿತ್ತು. ಕುಮಾರಸ್ವಾಮಿ ಅವರ ಆಡಳಿತದಲ್ಲಿ ರೇವಣ್ಣ ಅವರ ಹಸ್ತಕ್ಷೇಪ ತೀವ್ರವಾಗಿತ್ತು. ಹಾಗಂತ ಸರ್ಕಾರ ವಜಾ ಮಾಡಲಾಯಿತೇ? ಇದು ನಾಲ್ಕು ಗೋಡೆಗಳ ಮಧ್ಯೆ ಪರಿಹರಿಸಿಕೊಳ್ಳುವಂತಹ ವಿಷಯವಾಗಿದೆ.
ಸರ್ಕಾರದಲ್ಲಿ ಹೊಂದಾಣಿಕೆಯ ಯಾವುದೇ ಕೊರತೆಯಿಲ್ಲ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಮತ್ತು ನಾವು ಸೇರಿ ಬಗೆಹರಿಸಿಕೊಳ್ಳುತ್ತೇವೆ. ಮೀಸಲಾತಿಗೆ ಸಂಬಂಧಿಸಿ ನಾನು ಹಿಂದೆ ಹೇಳಿದ್ದನ್ನೇ ಈಗ ಮತ್ತೇ ಪುನರುಚ್ಛರಿಸುತ್ತೇನೆ. ಈ ಸಂದರ್ಭದಲ್ಲಿ ಮತ್ತೇ ಭರವಸೆ ನೀಡುವುದಿಲ್ಲ. ಸಿದ್ದರಾಮಯ್ಯ ಅವರು ಅಹಿಂದಾ ಹೋರಾಟ ಮಾಡಿದವರು. ಚುನಾವಣೆ ಬಂದರೇ ಮಾತ್ರ ಮೀಸಲಾತಿ ನೆನಪಾಗುತ್ತದೆ. ಮಸ್ಕಿ ಕ್ಷೇತ್ರದಲ್ಲಿ ಕಳೆದ ೧೦ ವರ್ಷದಿಂದ ಒಂದು ಯೋಜನೆ ಪೂರ್ಣಗೊಂಡಿಲ್ಲವೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಾಪಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.