ಈಶ್ವರಪ್ಪ ನೋವಿಗೆ ಕಾರಣ ತಿಳಿದಿಲ್ಲ : ಸೋಮಣ್ಣ

ಕಲಬುರಗಿ ಏ 3: ಈಶ್ವರಪ್ಪ ಹಿರಿಯರು ಅನುಭವಿಗಳು, ನನಗಿಂತ ಬುದ್ಧಿವಂತರು.ಅವರಿಗೆ ಈಗ ಯಾಕಾಗಿ ನೋವಾಗಿದೆ ಗೊತ್ತಿಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು. ಕಲಬುರಗಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಮೊಗ್ಗದವರ ಜಗಳ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಸರಿಯಲ್ಲ.ಇದನ್ನು ಸರಿಪಡಿಸುವ ಕೆಲಸ ರಾಜ್ಯ ಅಧ್ಯಕ್ಷರು ಮಾಡುತ್ತಾರೆ.ಯಡಿಯೂರಪ್ಪ ಸಿಎಂ ಆಗಬೇಕು ಅಂತ ನನ್ನನ್ನು ಬಿಜೆಪಿಗೆ ಕರೆದುಕೊಂಡು ಬಂದಿದ್ದೇ ಈಶ್ವರಪ್ಪ ಎಂದರು.
ನಾಲ್ಕು ಗೋಡೆಗಳ ನಡುವೆ ಈಶ್ವರಪ್ಪ ಏನು ಮಾಡಿದಾರೆ ನನಗೂ ಗೊತ್ತಿದೆ.
ಈಶ್ವರಪ್ಪನವರು ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ.
ಯಡಿಯೂರಪ್ಪ ಏನು ಮಾಡಿದಾರೆ.? ಈಶ್ವರಪ್ಪ ಏನು ಹೇಳಿದಾರೆ ? ಅನ್ನೋದೆಲ್ಲ 17 ರ ನಂತರ ಸಚಿವ ಸಂಪುಟದಲ್ಲಿ ಚರ್ಚಿಸುವೆ ಎಂದರು.