ಈಶ್ವರಪ್ಪ ನಡೆ ಸಚಿವ ಎಸ್‌ಟಿಎಸ್ ಅಸಮಾಧಾನ

ಮೈಸೂರು,ಏ.೫-ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಅವರ ವಿರುದ್ದ ಪಕ್ಷದ ಹೈಕಮಾಂಡ್‌ಗೆ ಸಚಿವ ಕೆ.ಎಸ್ ಈಶ್ವರಪ್ಪ ಪತ್ರ ಬರೆದ ಕ್ರಮಕ್ಕೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಜವಬ್ದಾರಿಯುತ ಸಚಿವರಾಗಿ ಶಾಸಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಮುಖ್ಯಮಂತ್ರಿಗಳು ಮದ್ಯ ಪ್ರವೇಶಿಸಬೇಕಾಗುತ್ತದೆ. ಇದು ಅವರ ವಿವೇಚನಾಧಿಕಾರ ಎಂದು ಮುಖ್ಯಮಂತ್ರಿಗಳ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅವರು ಶಾಸಕರಿಗೆ ಸ್ಪಂದಿಸಿದ್ದರೆ ಮುಖ್ಯಮಂತ್ರಿಗಳು ಶಾಸಕರಿಗೆ ಅನುದಾನ ಹಂಚಿಕೆ ಮಾಡುವ ಪ್ರಸ್ತಾಪೇ ಬರುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಂತ್ರಿಗಳು ತಕ್ಷಣ ಸ್ಪಂದಿಸಿದ್ದರೆ ಸಚಿವ ಈಶ್ವರಪ್ಪ ವಿರುದ್ದ ಮುಖ್ಯಮಂತ್ರಿಗಳಿU ಯಾರು ದೂರು ಕೊಡೋದಿಲ್ಲ. ಯಾರು ಸ್ಪಂದಿಸೋಲ್ಲ ಆಗ ದೂರು ಕೋಡೊದು ವಾಡಿಕೆ. ನಾನು ಸಹಕಾರಿ ಸಚಿವನಾಗಿದ್ದೇನೆ. ನಾನು ಸಹಕಾರಿಗಳಿಗೆ, ಶಾಸಕರಿಗೆ ಸ್ಪಂದಿಸೋದು ನನ್ನ ಕೆಲಸ. ನಾನು ಸ್ಪಂದಿಸದಿದ್ದರೆ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡ್ತಾರೆ ಎಂದರು.
ಸಚಿವ ಈಶ್ಚರಪ್ಪ ಪ್ರಕರಣ ಅಂತಲ್ಲ ಎಲ್ಲ ಸಚಿವರ ವಿಷಯದಲ್ಲು ಇದೆ ಆಗೋದು. ಯಾವ ಮಂತ್ರಿಯೇ ಆಗಲಿ ಅವರ ಕೆಲಸ ಮಾಡಬೇಕು. ಅದಕ್ಕೆ ಅಲ್ವಾ ನಮ್ಮನ್ನ ಮಂತ್ರಿ ಮಾಡಿರೋದು. ಮಂತ್ರಿಗಳು ಸ್ಪಂದಿಸದಿದ್ದರೆ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡೋದ್ರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.