ಈಶ್ವರಪ್ಪ ಜೊತೆ ಮಾತನಾಡುವೆ: ಜೋಶಿ

ಹುಬ್ಬಳ್ಳಿ, ಮಾ16: ಟಿಕೆಟ್ ವಿಷಯದಲ್ಲಿ ಉದ್ಭವಿಸಿರುವ ಸಮಸ್ಯೆ ಕುರಿತಂತೆ ತಾವು ಈಶ್ವರಪ್ಪನವರೊಂದಿಗೆ ಮಾತನಾಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ನಮಗಿಂತ ಬಹಳ ಹಿರಿಯರು, ಪಕ್ಷದ ಹಿತವನ್ನು ಬಿಟ್ಟು ಯೋಚನೆ ಮಾಡಿದವರಲ್ಲ. ಪಕ್ಷದ ನಿರ್ಣಯವನ್ನು ಮಾನ್ಯ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ನುಡಿದರು.
ಇನ್ನೂ ಸಮಯವಿದ್ದು ಬಹಳಷ್ಟು ಬದಲಾವಣೆ ಆಗಲಿದೆ, ಪ್ರಧಾನಿ ಮೋದಿ ಕಾರ್ಯಕ್ರಮದೊಳಗಾಗಿ ಬದಲಾವಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಜಗದೀಶ ಶೆಟ್ಟರ್ ಬೆಳಗಾವಿಯಲ್ಲಿ ಒಳ್ಳೆಯ ಅಂತರದಿಂದ ಗೆಲ್ಲುತ್ತಾರೆ ಎಂದ ಜೋಶಿ, ಅವರಿಗೆ ಶುಭ ಕೋರುವುದಾಗಿ ಹೇಳಿದರು. ಸ್ಥಳೀಯಮಟ್ಟದ ವಿರೋಧವನ್ನವರು ಸರಿ ಮಾಡುತ್ತಾರೆ ಎಂದು ಜೋಶಿ ನುಡಿದರು.