ಈಶ್ವರಪ್ಪ ಉತ್ತಮ ಭವಿಷ್ಯಗಾರ

ದಾವಣಗೆರೆ.ನ.೨೯;: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಸಚಿವರಾದ ಕೆ ಎಸ್ ಈಶ್ವರಪ್ಪ ಅವರ ನಾಲಿಗೆಗೆ ಈತ ಇಲ್ಲದೆ ಕೇವಲ ಟೀಕೆ ಮಾಡುವುದಕ್ಕೋಸ್ಕರ ಮಾತುಗಳನ್ನು ಆಡುತ್ತಿದ್ದಾರೆ ಅವರ ಮಾತುಗಳನ್ನು ತುಲನೆ ಮಾಡಿದರೆ ಯಾವುದೇ ನಿಲುವು ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮಾಜಿ ಸಚಿವ  ಎಚ್ ಎಂ ರೇವಣ್ಣ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಶ್ವರಪ್ಪ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ನಿರಾಣಿ ಅವರು ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದಾರೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಈಶ್ವರಪ್ಪ ಉತ್ತಮ ಭವಿಷ್ಯಗಾರರಾಗಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಇತ್ತೀಚೆಗಷ್ಟೇ 3ಜನ ಮುಖ್ಯಮಂತ್ರಿಗಳ ಬದಲಾವಣೆಯನ್ನು ನೋಡಿದ್ದೇವೆ ಇನ್ನು ಎಷ್ಟು ಜನ ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೋ ನಮಗೆ ಗೊತ್ತಿಲ್ಲ ಇಂತಹ ಆಡಳಿತ ರಾಜ್ಯದ ಜನರಿಗೆ ಹೆಚ್ಚು ಸಮಯ ಬೇಡ ಎಂದು ಹೇಳಿದರು.ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೇರಿದೆ ಅಲ್ಲದೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಇದಲ್ಲದೆ ಇತ್ತೀಚೆಗಷ್ಟೇ  ಕೆಲ ಜನಪ್ರತಿನಿಧಿಗಳು ಸೇರಿದಂತೆ ಇತರರು ರಾಜ್ಯಪಾಲರನ್ನು ಭೇಟಿ  ಮಾಡಿ 40ಪರ್ಸಂಟ್ ಸರ್ಕಾರವನ್ನು ವಜಾ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ. ಭ್ರಷ್ಟಾಚಾರದ ದಾಖಲೆಗಳನ್ನು ನೀಡಲಾಗಿದೆ ಈ ರೀತಿಯಾದರೂ ಅವುಗಳ ಬಗ್ಗೆ ದಾಖಲೆ ನೀಡುವಂತೆ ಸರ್ಕಾರ ಕೇಳುತ್ತಿರುವುದು ಎಷ್ಟು ಸಮಂಜಸ. ಜನ ಬೇಸತ್ತು ಹೋಗಿದ್ದು ವಿ ಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಗೆಲುವು ಸಿಗಲಿದೆ ಎಂದರು.