ಈಶ್ವರಪ್ಪರಿಂದ ಪ್ರಜಾಪ್ರಭುತ್ವಕ್ಕೆ ಅವಮಾನ : ಖರ್ಗೆ

ಕಲಬುರಗಿ,ಮೇ 4: ಕಾಂಗ್ರೆಸ್ ಪ್ರಣಾಳಿಕೆಯನ್ನ ಸುಟ್ಟು ಹಾಕಿರುವ ಈಶ್ವರಪ್ಪ ಜನರಿಗೆ ಕೊಟ್ಟ ಗ್ಯಾರೆಂಟಿ ಯೋಜನೆಗಳನ್ನು ಸುಟ್ಟು ಹಾಕಿದ್ದಾರೆ.ಈಶ್ವರಪ್ಪ ಜನತೆಗೆ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿರೋದು ಸರಿಯಲ್ಲ.ಯಾವುದೇ ಪ್ರಣಾಳಿಕೆ ಇಷ್ಟ ಇರಬಹುದು , ಇರದೆ ಇರಬಹುದು ಸುಡೋದು ಸರಿಯಲ್ಲ.ಈಶ್ವರಪ್ಪ ಅವರ ಕ್ರಿಯೆ ಅವರು ಜನರಿಗೆ ಪ್ರಚೋದನೆ ಮಾಡಿದಂತಾಗಿದೆ.ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ , ಸಮಾನತೆ ,ಸಹಿಷ್ಣುತೆ ಪ್ರಮುಖವಾಗಿದೆ.ಅದಕ್ಕೆ ತಕ್ಕ ಉತ್ತರ ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಣಾಳಿಕೆ ಕಮಿಟಿ ತಂಡದವರು ಉತ್ತರ ಕೊಡುತ್ತಾರೆ ಎಂದರು.
ಕಾಂಗ್ರೆಸ್ ಹಿಂದು ವಿರೋಧಿ ಎಂಬ ಹೇಳಿಕೆಗೆ ಉತ್ತರಿಸಿದ ಅವರು ಅದು ಅವರ ವಿಚಾರ ಇರಬಹುದು. ಅವರ ಹಿಂದುತ್ವ ಬೇರೆ.ನಾನು ಹಿಂದು , ನೀವು ಹಿಂದು ಇದ್ದೀರಿ. ನಿಮಗೆ ಇರೋ ಸ್ವಾತಂತ್ರ್ಯ ನನಗೆ ಇಲ್ಲ.ಈ ವಿಚಾರವಾಗಿ ಟಿಬೆಟ್ ಮಾಡಿದ್ರೆ ಆವಾಗ ಉತ್ತರ ಕೊಡೋಣ ಎಂದರು.