ಈಶ್ವರಪ್ಪನವರನ್ನು ಕಡೆಗಣಿಸಿದರೆ ಬಿಜೆಪಿಗೇ ನಷ್ಟ: ಮೋಹನ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮಾ 19  : ಬಿಜೆಪಿಯಿಂದ ಹಿಂದುಳಿದ ವರ್ಗದ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಅನ್ಯಾಯವಾಗಿದ್ದು. ಇದರ ವಿರುದ್ದ ಬಳ್ಳಾರಿ ಜಿಲ್ಲಾ ಕುರುಬರ ಸಂಘ ಹೋರಾಟ ಮಾಡಲು ನಿರ್ಧರಿಸಿದೆ.
ನಗರದಲ್ಲಿನ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂಘದ ಪ್ರಧಾನ ಕಾರ್ಯದರ್ಶಿ ಅಲ್ಲಿಪುರ ಕೆ.ಮೋಹನ್, ಬಿಜೆಪಿ
ಈಶ್ವರಪ್ಪರನ್ನು  ಕಡೆಗಣಿಸೋ ಮೂಲಕ ಅವಮಾನ ಮಾಡಿದೆ.
ವಿಧಾನ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ನೀಡಲಿಲ್ಲ, ಇನ್ನು ಲೋಕಸಭೆಯಲ್ಲಿ ಅವರ ಮಗನನ್ನು ತುಳಿಯುತ್ತಿದ್ದಾರೆ.
ಯಡಿಯೂರಪ್ಪನವರ  ಮಕ್ಕಳಾದರೆ ಶಾಸಕರು ಸಂಸದರು ರಾಜ್ಯಧ್ಯಕ್ಷರು ಆಗಬೇಕು,  ಈಶ್ವರಪ್ಪ ಯಾಕೆ ಬೇಡ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಅದನ್ನು ಬಂದ್ ಮಾಡಲು ಅಮಿತ್ ಷಾ ಹೇಳಿದ್ರು.ಪಕ್ಷದ ಅದೇಶಕ್ಕೆ ತಲೆ ಬಾಗಿದ್ರು ಅದನ್ನು ಪಕ್ಷ ಅರಿಯಬೇಕಿದೆ.
ಈ ಚುನವಣೆಯಲ್ಲಿ
ಯಡಿಯೂರಪ್ಪ ಅವರ ಮಗನನ್ನು ಸೋಲಿಸಬೇಕಾಗ್ತಿದೆ.ರಾಜ್ಯದ ಎಲ್ಲಾ ಕುರುಬರು ಶಿವಮೊಗ್ಗಕ್ಕೆ ಹೋಗಿ ಚುನಾವಣೆ ಮಾಡ್ತೇವೆಂದರು.
ಸದಾನಂದ ಗೌಡ, ಕರಡಿ ಸಂಗಣ್ಣ , ಪ್ರತಾಪ್ ಸಿಂಹ ಎಲ್ಲರನ್ನೂ ತುಳಿಯುವ‌ ಕೆಲಸ ಮಾಡ್ತಿದ್ದಾರೆ.
ಹಾವೇರಿ ಟಿಕೆಟ್ ಕಾಂತೇಶ್ ಅವರಿಗೆ ನೀಡದೇ ಇದ್ರೇ ರಾಜ್ಯಾದ್ಯಂತ ಕುರುಬರು ಬಿಜೆಪಿಗೆ ಬಹಿಷ್ಕಾರ ಹಾಕ್ತಾರೆ.
ಸಮಾಜಕ್ಕೆ ಅನ್ಯಾಯವಾದಾಗ ಪಕ್ಷ ಬೇದ ಮರೆತು ಈಶ್ವರಪ್ಪ ಪರವಾಗಿ ನಾವು ನಿಂತಿದ್ದೇವೆಂದರು‌‌.
ಈ ಬಗ್ಗೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಅಧ್ಯಕ್ಣ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆಯುತ್ತೇವೆ.. ಯಡಿಯೂರಪ್ಪಗೆ ಕೊಡುವ ಮರ್ಯಾದೆ ಈಶ್ವರಪ್ಪಗೂ ನೀಡಿ. ಪಕ್ಷ ಬೆಳೆಸಲು ಈಶ್ವರಪ್ಪ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕುರುಬರನ್ನು ನೋಯಿಸುವ ಕೆಲಸ ಮಾಡಬೇಡಿ ಇದರ ಪರಿಣಾಮ ಬಿಜೆಪಿ ಎದುರಿಸಬೇಕಾಗ್ತದೆಂದರು.
ಸಿದ್ದರಾಮಯ್ಯ ಹಿಂದೆ ಕುರುಬ ಸಮಾಜ ಇದೆ ಎಂದು ಈಶ್ವರಪ್ಪ ಕಡೆಗಣಿಸಿದ್ರೇ ಒಪ್ಪ ಪಲ್ಲವೆಂದರು.