ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ ಬಿಜೆಪಿ ಜಯಭೇರಿ

ಕಲಬುರಗಿ:ನ.10:ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.ಈ ಮೂಲಕ ಬಿಜೆಪಿ ಮತ್ತೆ ಈ ಕ್ಷೇತ್ರ ತನ್ನ ವಶಕ್ಕೆ ಪಡೆದುಕೊಂಡಿದೆ.

ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ 3138 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಮೋಶಿ 10210 ಮತ ಪಡೆದರೆ ಕಾಂಗ್ರೆಸ್ ನ ಅಭ್ಯರ್ಥಿ ಶರಣಪ್ಪ ಮಟ್ಟೂರ 7072 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಈ ಮೊದಲು ಈ ಕ್ಷೇತ್ರದಲ್ಲಿ ನಮೋಶಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಆದರೆ ಕಳೆದ 2014ರಲ್ಲಿ ಕಾಂಗ್ರೆಸ್ ನ ಶರಣಪ್ಪ ಮಟ್ಟೂರ ಗೆಲುವು ಸಾಧಿಸಿದ್ದರು.

ಬಿಜೆಪಿಯ ಅಭ್ಯರ್ಥಿ ಶಶೀಲ್ ಜಿ ನಮೋಶಿ ಪ್ರಥಮ ಪ್ರಾಶಸ್ತ್ಯ ದ ಮತ ಏಣಿಕೆಯಲ್ಲಿ ಭಾರಿ ಮುನ್ನಡೆ ಸಾಧಿಸಿದ್ದರು. ಆದರೆ ಪ್ರಥಮ ಪ್ರಾಶಸ್ತ್ಯ ದ ಮತ ಏಣಿಕೆಯಲ್ಲಿ ಮತದಾನದ ಶೇ. 50ರಷ್ಟು ಮತ ಪಡೆಯದ ಹಿನ್ನಲೆ ಯಲ್ಲಿ ದ್ವಿತೀಯ ಪ್ರಾಶಸ್ತ್ಯ ದ ಮತ ಏಣಿಕೆ ಅನಿವಾರ್ಯವಾಗಿ ನಡೆಯಿತು.

ಒಟ್ಟಾರೆ 21350 ಮತದಾನವಾಗಿದ್ದು, ಇದರಲ್ಲಿ 1844 ಮತಗಳು ತಿರಸ್ಕೃತ ಗೊಂಡಿವೆ. ಹೀಗಾಗಿ ಗೆಲ್ಲುವ ಅಭ್ಯರ್ಥಿ 9754 ಮತಗಳನ್ನು ಪಡೆಯಬೇಕು. ಆದರೆ ಬಿಜೆಪಿ ಅಭ್ಯರ್ಥಿ ಮೂರು ಸುತ್ತಿನ ಮತ ಏಣಿಕೆ ಸೇರಿದಂತೆ 9451 ಒಟ್ಟಾರೆ ಮತಗಳನ್ನು ಪಡೆದಿದ್ದರು.. ಹೀಗಾಗಿ ಗೆಲ್ಲಲು 346 ಮತಗಳ ಕೊರತೆಯಾಗಿದೆ. ಕಾಂಗ್ರೆಸ್ ನ ಅಭ್ಯರ್ಥಿ ಶರಣಪ್ಪ ಮಟ್ಟೂರು 6213 ಮತಗಳನ್ನು ಪಡೆದಿದ್ದರು .ಒಟ್ಟಾರೆ ನಮೋಶಿ ಪ್ರಥಮ ಪ್ರಾಶಸ್ತ್ಯ ದ ಮತ ಏಣಿಕೆಯಲ್ಲಿ ಮಟ್ಟೂರಗಿಂತ 3205 ಮತಗಳ ಮುನ್ನಡೆ ಸಾಧಿಸಿದ್ದರು. ಕೊನೆಗೆ ಎರಡನೇ ಪ್ರಾಶಸ್ತ್ಯ ದ ಮತ ಏಣಿಕೆಯಲ್ಲಿ ನಮೋಶಿ ಗೆಲುವು ಸಾಧಿಸಿದರು.
ತಮ್ಮ ಈ ಗೆಲುವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಟರಿಗೆ, ಪಕ್ಷದ ಕಾರ್ಯಕರ್ತರಿಗೆ ಜತೆಗ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಗೆಲುವು ಸಾಧಿಸಿದ ನಂತರ ನಮೋಶಿ ಹೇಳಿದರು.