ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ. ಕೂಡ್ಲಿಗಿ ತಾಲೂಕಿನಲ್ಲಿ ಶಾಂತಿಯುತ ಮತದಾನ

ಕೂಡ್ಲಿಗಿ.ಅ.28:-ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರಕ್ಕೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಕೂಡ್ಲಿಗಿ ತಾಲೂಕಿನ ಮೂರು ಮತಗಟ್ಟೆಯಲ್ಲಿ ಬೆಳಿಗ್ಗೆ 8ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸ್ಪರ್ಧಾಳುಗಳ ಹಣೆಬರಹದ ಮತದಾನ ಶಿಕ್ಷಕರು ಮಾಡಿದ್ದು ಕೂಡ್ಲಿಗಿ ತಾಲೂಕಿನಲ್ಲಿ ಬೆಳಿಗ್ಗೆಯಿಂದಲೇ ಶಾಂತಿಯುತ ಮತದಾನ ನಡೆದಿರುವುದು ತಿಳಿದಿದೆ. ಕೂಡ್ಲಿಗಿ ತಾಲೂಕಿನಲ್ಲಿ ಮೂರು ಮತಗಟ್ಟೆಗಳಿದ್ದು ಕೂಡ್ಲಿಗಿ ಪಟ್ಟಣ ಪಂಚಾಯತಿ ಕಾರ್ಯಾಲಯ, ಗುಡೇಕೋಟೆ ಗ್ರಾಮಪಂಚಾಯಿತಿ ಕಾರ್ಯಾಲಯ, ಮತ್ತು ಹೊಸಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಮತದಾನ ನಡೆಯುತ್ತಿದ್ದು ಇಂದು ಬೆಳಿಗ್ಗೆ 8ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಸಂಜೆ 5ಗಂಟೆವರೆಗೂ ನಡೆಯಲಿದೆ ಕೂಡ್ಲಿಗಿ ಮತಗಟ್ಟೆಲಿ 110 ಮತದಾರರು, ಗುಡೇಕೋಟೆ ಮತಗಟ್ಟೆಲಿ 69 ಮತದಾರರು ಮತ್ತು ಹೊಸಹಳ್ಳಿ ಮತಗಟ್ಟೆಲಿ 97 ಮತದಾರರಿದ್ದು ಆಗೊಮ್ಮೆ ಈಗೊಮ್ಮೆ ಒಬ್ಬೊರಾಗಿ ಬಂದು ಬೆಳಿಗ್ಗೆಯಿಂದ ಶಾಂತರೀತಿಯಲ್ಲಿ ಮತದಾನ ಮಾಡಿದರು. ಕೂಡ್ಲಿಗಿ ಮತಗಟ್ಟೆಲಿ ಇಂದು ಬೆಳಿಗ್ಗೆ ಶಿಕ್ಷಕರು ಹಾಗೂ ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವರಾಜ್ ಪಾಲ್ತೂರ್ ಹಾಗೂ ಅವರ ಪತ್ನಿ ಶಿಕ್ಷಕಿ ಅವರು ಸಹ ಮತದಾನ ಮಾಡಿದರು. ಮೂರು ಮತಗಟ್ಟೆಯಲ್ಲಿ ನೇಮಕವಾಗಿರುವ ಚುನಾವಣಾ ಸಿಬ್ಬಂದಿಗಳು ಕೋವಿಡ್ ಸುರಕ್ಷತೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು ಎಲ್ಲಾ ಮತದಾರ ಶಿಕ್ಷಕರು ಶಾಂತಿಯುತ ಮತದಾನಕ್ಕೆ ಸಹಕರಿಸಿದರು. ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ್ ಮೂರು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.