ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ:ಸುಲೆಪೇಟ್‍ನಲ್ಲಿ ಮತದಾನ ಕೇಂದ್ರ ಬದಲು

ಕಲಬುರಗಿ.ಅ.26: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಅ. 28 ರಂದು ಮತದಾನ ನಡೆಯಲಿದ್ದು, ಪೂರ್ವ ನಿಗದಿತ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ನಾಡ ಕಛೇರಿಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರ ಸಂಖ್ಯೆ 99ರಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ತುಂಬಿದ್ದರಿಂದ ನಾಡ ಕಛೇರಿ ಸುಲೇಪೇಟ್ ಬದಲಾಗಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಸುಲೇಪೇಟ ಕಟ್ಟಡಕ್ಕೆ ಮತದಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮತದಾನ ಕೇಂದ್ರ ಬದಲಾವಣೆಗೆ ಚುಣಾವಣಾ ಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅನುಮತಿ ದೊರಕಿದೆ. ಈ ಹಿನ್ನೆಲೆಯಲ್ಲಿ ನಾಡ ಕಛೇರಿ, ಸುಲೇಪೇಟ್ ಮತದಾನ ಕೇಂದ್ರಕ್ಕೆ ಒಳಪಡುವ ಮತದಾರರು ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಸುಲೇಪೇಟ್‍ನಲ್ಲಿ ಮತದಾನ ಮಾಡುವಂತೆ ಎಲ್ಲಾ ಮತದಾರರಿಗೆ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.