ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು

ಬಳ್ಳಾರಿ, ನ.11: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ನಿನ್ನೆ ಕಲ್ಬುರ್ಗಿಯಲ್ಲಿ ನಡೆದು. ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಒಟ್ಟಾರೆ ಕಣದಲ್ಲಿದ್ದ ಐದು ಅಭ್ಯರ್ಥಿಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ ವಾಟಾಳ್ ಪಕ್ಷದ ವಾಟಾಳ ನಾಗರಾಜ, ಸ್ವತಂತ್ರ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಹಾಗೂ ಜೆ.ಡಿ.ಎಸ್. ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರನ್ನು ಕ್ರಮವಾಗಿ ಎಲಿಮಿನೇಟ್ ಮಾಡಿದ ನಂತರ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ-10212 ಮತ ಪಡೆದು ಆಯ್ಕೆಯಾದರು. ವಿನ್ನಿಂಗ್ ಕೋಟಾ 9717 ಮತ ಶಶೀಲ್ ಜಿ. ನಮೋಶಿ ಪಡೆದಿದ್ದರಿಂದ ಚುನಾವಣಾ ಫಲಿತಾಂಶ ಘೋಷಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 7082 ಮತಗಳನ್ನು ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪಡೆದಿದ್ದು 2299 ಮತಗಳನ್ನು ಪಡೆದರು.