ಈಶಾನ್ಯ ರಾಜ್ಯಗಳ ಜಯ
 ನಗರದಲ್ಲಿ ಬಿಜೆಪಿ ವಿಜಯೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.03: ಭಾರತೀಯ ಜನತಾ ಪಾರ್ಟಿಯು ದೇಶದ ಈಶಾನ್ಯ ರಾಜ್ಯಗಳಾದ  ತ್ರೀಪುರ ಹಾಗು ನಾಗಾಲ್ಯಾಂಡ್  ವಿಜಯವನ್ನು ಸಾಧಿಸಿದ್ದರ ಹಿನ್ನಲೆಯಲ್ಲಿ ನಿನ್ನೆ ಸಂಜೆ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ವಿಜಯದ ಘೋಷಣೆಗಳನ್ನು ಕೂಗುತ್ತ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಗುರುಲಿಂಗನಗೌಡ. ಎರ್ರಂಗಳಿ  ತಿಮ್ಮಾರೆಡ್ಡಿ. ಎಸ್.ಮಲ್ಲನ ಗೌಡ. ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ. ರಾಮ್ ಪ್ರಸಾದ್.ಜಿಲ್ಲಾ ಮಹಿಳಾ ಮೋಚ೯ ಅಧ್ಯಕ್ಷೆ ಸುಗುಣ. ಮಾಧ್ಯಮ ಸಹ ಸಂಚಾಲಕ ರಾಜೀವ್ ತೊಗರಿ ಮೊದಲಾದವರು  ಪಾಲ್ಗೊಂಡಿದ್ದರು.