ಈಶಾನ್ಯ ರಾಜ್ಯಗಳಲ್ಲಿ ಸೋಂಕು ಏರಿಕೆ

ನವದೆಹಲಿ,ಆ.-೧ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಕುಸಿತ ಕಂಡಿದ್ದರೂ ಕರ್ನಾಟಕ,ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

ದೇಶದಲ್ಲಿ ಕೋವಿಡ್-ಸಂಬಂಧಿತ ಸಾವುಗಳು ಹಿಂದಿನ ವಾರದಂತೆಯೇ ಮುಂದುವರಿದಿದೆ. ಹಿಂದಿನ ಆರು ವಾರಗಳಲ್ಲಿ ಸಾವುಗಳು ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರ್ನಾಟಕದಲ್ಲಿ ೧೧,೫೮೫ ಪ್ರಕರಣ ವರದಿಯಾಗಿದ್ದು ಶೇ, ೨೩ ರಷ್ಟು ಹೆಚ್ಚಾಗಿದೆ.ದೆಹಲಿಯಲ್ಲಿ ಪ್ರಕರಣಗಳಲ್ಲಿ ಶೇ.೬೩ ರಷ್ಟು ಏರಿಕೆಯಾಗಿದೆ, ಕಳೆದ ವಾರ ೪,೪೭೭ ರಿಂದ ೭,೨೭೯ ಕ್ಕೆ ಏರಿದೆ. ಹರಿಯಾಣದಲ್ಲಿ, ಸೋಂಕು ಶೇ.೨೯ ರಷ್ಟು ಏರಿಕೆಯಾಗಿದ್ದು ೪,೩೨೮ ಕ್ಕೆ ತಲುಪಿದೆ. ತೆಲಂಗಾಣದಲ್ಲಿ ೫,೫೪೩ ಪ್ರಕರಣ ದೃಢಪಟ್ಟಿದ್ದು ಶೇ ೨೩೯ ರಷ್ಟು ಹೆಚ್ಚಾಗಿದೆ.

ದೇಶದಲ್ಲಿ ಪ್ರಸಕ್ತ ವಾರದಲ್ಲಿ ಜು.೨೫ ರಿಂದ ಸುಮಾರು ೧.೩೧ ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಈ ವಾರ ಮತ್ತಷ್ಟು ಹೆಚ್ಷಾಗುವ ಸಾದ್ಯತೆಗಳಿವೆ ಎನ್ನಲಾಗಿದೆ.

ಕೋವಿಡ್ ಅಂಕಿಅಂಶದ ಪ್ರಕಾರ ಹಿಂದಿನ ಏಳು ದಿನಗಳಲ್ಲಿ ೧.೩೬ ಲಕ್ಷಕ್ಕಿಂತ ಹೆಚ್ಚು. ಮೇ ೧೬-೨೨ರ ಮೊದಲ ವಾರ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ. ದೇಶದಲ್ಲಿ ಸಾಪ್ತಾಹಿಕ ಪ್ರಕರಣಗಳು ಮೇ ೧೬ ೨೨ ರಲ್ಲಿ ೧೪,೫೨೯ ರಿಂದ ಕಳೆದ ವಾರದವರೆಗೆ ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ಕೇರಳದಲ್ಲಿ ಶೇ. ೨೬ ರಷ್ಟು ,ಮಹಾರಾಷ್ಟ್ರ ಶೇ.೧೧ ರಷ್ಟು ತಮಿಳುನಾಡು ನಲ್ಲಿ ಶೇ.೨೮, ಮತ್ತು ಪಶ್ವಿಮ ಬಂಗಾಳದಲ್ಲಿ ಶೇ.೪೨ ರಷ್ಟು ಕುಸಿತ ಕಂಡಿದೆ. ಮಹಾರಾಷ್ಟ್ರವು ದೇಶದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಿಸಿದೆ.

ಉತ್ತರ ಭಾರತದ ಎರಡು ಗುಡ್ಡಗಾಡು ರಾಜ್ಯಗಳಲ್ಲಿ ಪ್ರಕರಣಗಳು ತೀವ್ರವಾಗಿ ಏರಿದೆ, ಜೊತೆಗೆ ಜಮ್ಮು ಕಾಶ್ಮೀರದಲ್ಲಿ ೪,೫೯೧ ಹೊಸ ಸೋಂಕುಗಳೊಂದಿಗೆ ಶೇ.೪೬ ರಷ್ಟು ಏರಿಕೆಯಾಗಿದೆ

ಹಿಮಾಚಲದಲ್ಲಿ ೫.೫೫೨ ಪ್ರಕರಣಗಳು ದಾಖಲಾಗಿದ್ದು, ಶೇ.೩೭ ಹೆಚ್ಚಳವಾಗಿದ್ದರೆ, ಉತ್ತರಾಖಂಡ್ ೧,೯೦೨ ಪ್ರಕರಣಗಳೊಂದಿಗೆ ಶೇ. ೫೪ ಹೆಚ್ಚಳವನ್ನು ದಾಖಲಾಗಿದೆ.