ಈಶಾನ್ಯ ಪದವೀಧರ ಚುನಾವಣೆ: ಅರ್ಹ ಮತದಾರರಿಂದ ಅರ್ಜಿ ಅಹ್ವಾನ

ಬಸವಕಲ್ಯಾಣ:ಅ.22: ಮುಂಬರುವ ಈಶಾನ್ಯ ಪದವೀಧರರ ಚುನಾವಣೆಗೆ ಹೊಸದಾಗಿ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದ್ದು, ಪದವಿ ಪೂರ್ಣಗೊಂಡಿರುವ ಅರ್ಹ ಮತದಾರರಿಂದ ಮತಪಟ್ಟಿಯಲ್ಲಿ ಹೆಸರು ಸೆರ್ಪಡೆ ಮಾಡಲು ಅರ್ಜಿ ಅಹ್ವಾನಿಸಲಾಗಿದೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ ಶಾಂತಗೌಡ ಬಿರಾದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತ ಚುನಾವಣಾ ಆಯೋಗವು ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಅರ್ಹತಾ ಪಟ್ಟಿಯು ಸಿದ್ದಪಡಿಸಲು ಅಗಸ್ಟ 09, 2023 ರಂದು ಪತ್ರವನ್ನು ಜಾರಿ ಮಾಡಿದ್ದು, ಅರ್ಹ ಮತದಾರರು ನಮೂನೆ 18 ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಇದರೊಂದಿಗೆ ಅಭ್ಯರ್ಥಿಯು ಆಧಾರ ಕಾರ್ಡ ಪ್ರತಿ, ಮತದಾರರ ಗುರುತಿನ ಚೀಟಿ, ಎರಡು ಭಾವಚಿತ್ರ (ಪಾಸ್ಪೋರ್ಟ ಅಳತೆ) ಹಾಗೂ ಪದವಿ ಅಂತಿಮ ವರ್ಷದ ಅಂಕಪಟ್ಟಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿ: 06-11-2023, ಕರಡು ಮತದಾರರ ಪಟ್ಟಿ ಪ್ರಕಟಣೆ ದಿ: 23-11-2023, ಆಕ್ಷೇಪಣೆ ಸಲ್ಲಿಸುವ ಕೊನೆಯ ದಿ: 09-12-2023 ಹಾಗೂ ಅಂತಿಮ ಪಟ್ಟಿ ಪ್ರಕಟಣೆ ದಿ: 30-12-2023 ಆಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.