ಈಶಾನ್ಯ ಪದವೀಧರ ಚುನಾವಣೆತಮ್ಮನ್ನು ಬೆಂಬಲಿಸಲು ಪ್ರತಾಪ್ ರೆಡ್ಡಿ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.14: ವಿಧಾನ‌ಪರಿಷತ್ತಿನ   ಮುಂಬರುವ ಈಶಾನ್ಯ ಪದವೀದರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಬಳ್ಳಾರಿಯ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್‌ ರೆಡ್ಡಿ ಇಂದು ಹೊಸಪೇಟೆ, ಕೊಟ್ಟೂರು,ಹರಪನಹಳ್ಳಿ ತಾಲುಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಠಾಧೀಶರನ್ನು  ಭೇಟಿಯಾಗಿ ಮನವಿ ಮಾಡಿದ್ದಾರೆ.
ಹರಪನಹಳ್ಳಿ ತೆಗ್ಗಿನಮಠ ಸ್ವಾಮೀಜಿಯವರ ಆಶಿರ್ವಾದ ಪಡೆದು ನಂತರ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಮುಖಂಡರೊಂದಿಗೆ  ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು‌ ಕೋರಿದರು.
ಪದವೀಧರರು,  ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಯೂತ್ ಕಾಂಗ್ರೆಸ್‌ನ ಮುಖಂಡರು ಪಾಲ್ಗೊಂಡಿದ್ದರು

One attachment • Scanned by Gmail