ಈಶಾನ್ಯ ಪದವೀಧರ ಕ್ಷೇತ್ರ ಮತ್ತೆಬಿಜೆಪಿ ತೆಕ್ಕೆಗೆ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,3- ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಬರಲಿದೆಂಬ ವಿಶ್ವಾಸವನ್ನು ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಗರದ ಗರ್ಲ್ಸ್ ಹೈಸ್ಕೂಲ್ ನಲ್ಲಿ ಮತದಾನ ಮಾಡಿ ನಂತರ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಈ ಮೊದಲು ಈ ಕ್ಷೇತ್ರ ಬಹುತೇಖ ಬಿಜೆಪಿಯದ್ದೇ ಆಗಿತ್ತು. ಕಳೆದ ಬಾರಿ ಕಾಂಗ್ರೆಸ್ ಪಾಲಾಗಿತ್ತು. ಆದರೆ ಈ ಬಾರಿ ಮತ್ತೆ ಅಮರನಾಥ ಪಾಟೀಲರು ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ಪಕ್ಷದ ಪರ ಮತದಾರರ ಒಲವು ಇದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳು ಸಹ   ರಾಜ್ಯದ ಹಾಗೂ ರಾಷ್ಟ್ರದ ಇತರೆ ಪ್ರದೇಶಗಳ ಜೊತೆ ಸರಿಸಮನಾದ ವಿಕಾಸ. ಮೂಲಭೂತ ಸೌಕರ್ಯ, ನಿರುದ್ಯೋಗ ನಿವಾರಣೆ, ಶಿಕ್ಷಣದ ಅಭಿವೃದ್ಧಿ,  ಆರೋಗ್ಯ, ಕೃಷಿ ಹಾಗೂ ನೀರಾವರಿಯಲ್ಲಿ ಬೆಳವಣಿಗೆ ಹೊಂದಬೇಕು.
ಸಂವಿಧಾನದ 371(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಗೊಂಡ ಬಳಿಕ ಅದರ ಮೂಲ ಉದ್ದೇಶ ಈಡೇರಿಸಬೇಕು. ರಾಜ್ಯದ ಇತರೆ ಪ್ರದೇಶದಲ್ಲಿ 8% ಮೀಸಲಾತಿ ಜಾರಿಗೆ ತರುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗದ ಸೃಷ್ಟಿಯಾಗಬೇಕು ಹಾಗೂ ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ನಡೆಯಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ತಂದು ಕಾಲ ಮಿತಿಯೊಳಗೆ ಅದರ ಅನುಷ್ಠಾನವಾಗಬೇಕು ಹಾಗೂ ಮಂಡಳಿಗೆ ತನ್ನದೆಯಾದ ಅನುಷ್ಠಾನ ಸಿಬ್ಬಂದಿ ಹಾಗೂ ಕಚೇರಿಗಳು 7 ಜಿಲ್ಲೆಗಳಲ್ಲಿ ಸ್ಥಾಪಿಸಬೇಕು. ಅದಕ್ಕಾಗಿ ಹೋರಾಟದ ಮನೋಭಾವ ಹೊಂದಿರುವ ಅಮರನಾಥ ಪಾಟೀಲರಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಮತದಾರರು ನೀಡಿದ್ದು. ಮೊದಲ ಪ್ರಾಶಸ್ತ್ಯದ  ಮತ ಎಣಿಕೆಯಲ್ಲಿಯೇ ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.