ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಆರಂಭಿಸಿದ ಪಕ್ಷೇತರ ಅಭ್ಯರ್ಥಿ ಪ್ರತಾಪ ರೆಡ್ಡಿ


 ಎನ್.ವೀರಭದ್ರಗೌಡ
ಬಳ್ಳಾರಿ, ಮೇ.08: ಕಳೆದ ಬಾರಿ ಅಲ್ಪ ಮತಗಳ ಅಂತರದಿಂದ ಗೆಲುವಿನಿಂದ ವಂಚಿತರಾದ ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ತಿನ ಅಭ್ಯರ್ಥಿ ನಗರದವರೇ ಆದ ನಾರಾ ಪ್ರತಾಪರೆಡ್ಡಿ ಈ ಬಾರಿ ಗೆಲುವಿಗಾಗಿ  ಮುಂದಿನ ತಿಂಗಳು ನಡೆಯುವ ಚುನಾವಣೆಗೆ ಇತರೇ ಪಕ್ಷದ ಅಭ್ಯರ್ಥಿಗಳಿಗಿಂತ ಪ್ರಚಾರ ಕಾರ್ಯದಲ್ಲಿ ಬಿರುಸಿನಿಂದ ಮುಂದಡಿ ಇಟ್ಡಿದ್ದಾರೆ.
ಈಗಾಗಲೇ ಜಿಲ್ಲೆಯ ಮತದಾರರ ಮನೆ ಮನೆಗಳಿಗೆ ತೆರಳಿ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಎಂಬ ಭರವಸೆಯ ಪದಗಳೊಂದಿಗೆ ತಮ್ಮ ಭಾವಚಿತ್ರ ಸಮೇತ ಇರುವ ಸ್ಟಿಕರನ್ನು ಗೋಡೆಗೆ ಅಂಟಿಸುವ ಕಾರ್ಯವನ್ನು ಬೆಂಬಲಿಗರಿಂದ ಆರಂಭಿಸಿದ್ದಾರೆ‌ ಜೊತೆಗೆ ಆ ಮನೆಯಲ್ಲಿ ಎಷ್ಡು ಜನ ಮತದಾರರು ಇದ್ದಾರೆ ಎಂಬುದನ್ನು ಗುರುತಿಸಿದ್ದಾರೆ.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು‌ ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಮುಂದಿದ್ದರೂ, ಗೆಲುವಿಗೆ ಅಗತ್ಯವಾದಷ್ಟು ಮತಗಳನ್ನು ಪಡೆಯದಿದ್ದಾಗ, ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿ, ಜೊತಗೆ ಅನೇಕ ಮತಗಳು ತಿರಸ್ಕೃತ (ಕುಲಗೆಟ್ಟ) ಮತಗಳಾಗಿದ್ದರಿಂದ ಸೋಲು ಕಾಣಬೇಕಾಯ್ತು.
ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಅಲ್ಲದೆ ಕಳೆದ ಬಾರಿ ನಮ್ಮದೇ ಜಿಲ್ಲೆಯ ಅಭ್ಯರ್ಥಿ ಬಿಜೆಪಿಯಿಂದ ಸ್ಪರ್ಧೆಯಲ್ಲಿದ್ದರಿಂದ ಇವರ ಗೆಲುವಿಗೆ ಒಂದಿಷ್ಟು ತೊಡಕಾಗಿತ್ತು ಎನ್ನಬಹುದು.
ಈ ಬಾರಿ ಕಾಂಗ್ರೆಸ್ ನಿಂದ ಮತ್ತೆ ಅವರೇ ಕಣಕ್ಕಿಳಿಯುವ ಬಗ್ಗೆ ಆ ಪಕ್ಷ ಘೋಷಣೆ ಮಾಡಿದೆ. ಆದರೆ ಇನ್ನೂ ಬಿಜೆಪಿ ಮಾತ್ರ ತನ್ನ ಅಭ್ಯರ್ಥಿ ಯಾರೆಂದು ನಿರ್ಧರಿಸಿಲ್ಲ.
ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಪ್ರಯತ್ನ ನಡೆಸಿದ್ದೆ ಪ್ರತಾಪ್ ರೆಡ್ಡಿ ಅವರು  ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಕಲ ರೀತಿ ಸಜ್ಜು ಮಾಡಿಕೊಂಡಿದ್ದಾರೆ.
ನಾಮ‌ಪತ್ರ:
ಪಕ್ಷೇತರ ಅಭ್ಯರ್ಥಿಯಾಗಿ ನಾರಾ ಪ್ರತಾಪ್ ರೆಡ್ಡಿ ಅವರು ಈ ತಿಂಗಳ 14 ರಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ  ನಾಮಪತ್ರ ಸಲ್ಲಿಸಲಿದ್ದಾರಂತೆ. 
 ಅಧಿಸೂಚನೆ:
ಈ ಚುನಾವಣೆಗೆ ನಾಳೆ ಅಧಿಸೂಚನೆ ಹೊರಡಿಸಲಿದೆ.
ನಾಳೆಯಿಂದಲೇ  ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.  ಮೇ 16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಮೇ.17 ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮೇ. 20 ಕೊನೆಯ ದಿನವಾಗಿದೆ. ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ಜರುಗಲಿದೆ. ಜೂನ್ 6 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.
22,156 ಮತದಾರರು, 16 ಮತಗಟ್ಟೆಗಳು: ಬಳ್ಳಾರಿ ಜಿಲ್ಲೆಯಲ್ಲಿ 13,744 ಪುರುಷರು, 8,408 ಮಹಿಳೆಯರು, ಇತರೆ-04 ಸೇರಿದಂತೆ ಒಟ್ಟು 22,156 ಪದವೀಧರ ಮತದಾರರಿದ್ದು. ಮೊನ್ನೆವರೆಗೆ ಹೆಸರು ಸೇರಿಸಲು ಅವಕಾಶ ವಿತ್ತು. ಮತದಾರರ ಸಂಕ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾರರ ಸಂಖ್ಯೆ ಹಲವಡೆ ಹೆಚ್ಚುತ್ತಿರುವುದರಿಂದ ಮತಗಟ್ಟೆ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ.
ಗೆಲುವೇ ಗುರಿ:
ನಮ್ಮದೇನಿದ್ದು ಗೆಲುವಿನ ಗುರಿ, ಅದಕ್ಕಾಗಿ ಸೋಲೇ ಗೆಲುವಿನ ಸೋಪಾನ ಎಂದು. ಕಳೆದ ಬಾರಿ ಕೆಲ ಸೂಕ್ಷ ತಪ್ಪುಗಳಿಂದ ಸೋಲಿಗೆ ಕಾರಣವಾಯ್ತು. ಅದಕ್ಕಾಗಿ ಈ ಬಾರಿ ಅವೆಲ್ಲವನ್ನು ತಿದ್ದಿಕೊಂಡು. ಕಳೆದ 9 ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ವ್ಯವಸ್ತಿತವಾಗಿ  ಕ್ಷೇತ್ರದ 7 ಜಿಲ್ಲೆಗಳಲ್ಲಿ ಸುತ್ತಿ ಬಂದಿದ್ದೇನೆ. ಗೆಲುವಿನ ವಿಶ್ವಾಸ ನನ್ನದು ಯಾವುದಕ್ಕೂ ಮತದಾರರ ಪ್ರಭುಗಳ ಆಶಿರ್ವಾದ ಮುಖ್ಯ.
ನಾರಾ ಪ್ರತಾಪ್ ರೆಡ್ಡಿ.
ಈಶಾನ್ಯ ಪದವೀಧರ ಕ್ಷೇತ್ರದ
ಸ್ಪರ್ಧಾ ಆಕಾಂಕ್ಷಿ, ಬಳ್ಳಾರಿ.