ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರ ಬಳ್ಳಾರಿ‌ ಜಿಲ್ಲೆಯಲ್ಲಿ ಶೇ 74.37 ಮತದಾನ

ಬಳ್ಳಾರಿ, ಅ.29: ಈಶಾನ್ಯ ವಲಯ ಶಿಕ್ಷಕರ ಮತಕ್ಷೇತ್ರಕ್ಕೆ ನಿನ್ನೆ ನಡೆದ ಮತದಾನದಲ್ಲಿ ಗಣಿ‌ನಾಡು ಬಳ್ಳಾರಿ‌ ಜಿಲ್ಲೆಯಲ್ಲಿ ಮತದಾನ ಸಂಜೆ 5 ಕ್ಕೆ ಅಂತ್ಯಗೊಂಡಿದ್ದು.
ಶೇ 74.37 ಮತದಾನವಾಗಿದೆ.
ಜಿಲ್ಲೆಯಲ್ಲಿ ಎರೆಡು ಹೆಚ್ಚುವರಿ ಸೇರಿ 26 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಮತದಾನ ಆರಂಭಗೊಂಡು 3379 ಪುರುಷ ಮತ್ತು 1643 ಮಹಿಳಾ ಮತದಾರರು ಸೇರಿ 5022 ಶಿಕ್ಷಕರು, ಉಪನ್ಯಾಸಕರಿಂದ ಮತದಾನ ಮಾಡಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು, ಬಿಜೆಪಿ ಅಭ್ಯರ್ಥಿ ವಿಧಾನ ಪರಿಷತ್ತಿನ‌ ಮಾಜಿ ಸದಸ್ಯ ಶಶೀಲ‌ ಜಿ ನಮೋಶಿ, ಜೆಡಿಎಸ್ ನ ತಿಮ್ಮಯ್ಯ ಪುರ್ಲೆ ಸೇತಿದಂತೆ ಐದು ಜನ ಅಭ್ಯರ್ಥಿಗಳ ಮತ ಭವಿಷ್ಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಸಂಡೂರು ತಾಲೂಕಿನಲ್ಲಿ 77.96 ಮತದಾನವಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಶೇ.82.56 ಮತ್ತು ಹಡಗಲಿ ತಾಲೂಕಿನಲ್ಲಿ ಶೇ.73.95 ಮತದಾನವಾಗಿದೆ.
ಜಿಲ್ಲೆಯ ಮತಪೆಟ್ಟಿಗೆಗಳನ್ನು ಕಲ್ಬುರ್ಗಿಗೆ ಸಾಗಿಸಲಿದ್ದು ನವೆಂಬರ್ 2 ರಂದು ಮತಗಳ ಎಣಿಕೆ ನಡೆಯಲಿದೆ.