ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ: ಬೀದರ ಜಿಲ್ಲೆಯಲ್ಲಿ ಶೇ.74.40ರಷ್ಟು ಮತದಾನ

ಬೀದರ ಅ. 28 : ಬೀದರ್ ಜಿಲ್ಲೆಯಲ್ಲಿ ಅ. 28ರಂದು ನಡೆದ ವಿಧಾನ ಪರಿಷತ್ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಶೇ.74.40ರಷ್ಟು ಮತದಾನ ದಾಖಲಾಗಿದೆ.
ಪುರುಷ ಹಾಗೂ ಮಹಿಳೆಯರು ಸೇರಿ ಒಟ್ಟು 4926 ಮತದಾರರ ಪೈಕಿ 3665 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 3433 ಪುರುಷ ಮತದಾರರ ಪೈಕಿ 2736 ಮತದಾರರು ಹಾಗೂ 1493 ಮಹಿಳಾ ಮತದಾರರ ಪೈಕಿ 929 ಮತದಾರರು ಮತ ಚಲಾಯಿಸಿದ್ದಾರೆ. ಶೇಕಡಾವಾರು ಪುರುಷರು 79.70ರಷ್ಟು ಮತ್ತು ಮಹಿಳೆಯರು 62.22ರಷ್ಟು ಮತದಾನ ಮಾಡಿದ್ದಾರೆ.