ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ.ಜ.7:ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ನೂತನವಾಗಿ ಚಾಲಕರಿಗೆ ಅಪಘಾತಗಳ ಅರಿವು ಮೂಡಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಹಾಗೂ ಸಂಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಉಪಯುಕ್ತವಾಗುವ ವಿಷಯಗಳ ಕುರಿತು ನಾಣ್ಣುಡಿಗಳೊಂದಿಗೆ ತಯಾರಿಸಿದ ವರ್ಣರಂಜಿತ 2021ನೇ ಸಾಲಿನ ಕ್ಯಾಲೆಂಡರ್‍ನ್ನು ವಿಧಾನ ಸಭಾ ಸದಸ್ಯರು ಸೇಡಂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜಕುಮಾರ ಪಾಟೀಲ್ ತೇಲ್ಕೂರ ರವರು ಈ.ಕ.ರ.ಸಾ.ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.
ಸಭೆಯನ್ನುದ್ದೇಶಿಸಿ ಅಧ್ಯಕ್ಷರು ಮಾತನಾಡುತ್ತಾ ಸದರಿ ಕ್ಯಾಲೆಂಡರ್‍ಗಳಲ್ಲಿ ಅಳವಡಿಸಿರುವ ನಾಣ್ಣುಡಿಗಳು ಸಂಸ್ಥೆಯ ಅಧಿಕಾರಿ/ಸಿಬ್ಬಂದಿ/ಚಾಲಕರಿಗೆ ಬಹಳಷ್ಟು ಉಪಯುಕ್ತವಾಗಿರುತ್ತವೆಂದು ಶ್ಲಾಘನಿಸಿರುತ್ತಾರೆ. ನೀವು ಸುರಕ್ಷಿತವಾಗಿದ್ದು ಇತರರನ್ನು ಸುರಕ್ಷಿತವಾಗಿರಲು ಸಹಕರಿಸಿರಿ, ನೀವು ಸುರಕ್ಷಿತವಾಗಿದ್ದರೆ ನಿಮ್ಮ ಕುಟುಂಬ ಸುರಕ್ಷಿತ ಎಂದು ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ತಿಳಿಸಿದರು. ಕರ್ತವ್ಯದ ಮೇಲೆ ಮದ್ಯಪಾನ, ಧೂಮಪಾನ ಹಾಗೂ ಮೊಬೈಲ್ ಬಳಸುವುದು ಬೇಡವೆಂದು ಎಲ್ಲಾ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿದರು. ಅದರಂತೆ ಪ್ರಯಾಣಿಕರೆ ದೇವರು ಎಂದು ತಿಳಿದುಕೊಂಡು ಸಂಸ್ಥೆಯನ್ನು ರಾಜ್ಯ, ದೇಶ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಪ್ರಯತ್ನಿಸಲು ತಿಳಿಸಿರುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸಂಸ್ಥೆಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಸಹ ಮಾತನಾಡಿ ಕಳೆದ 3-4 ತಿಂಗಳುಗಳಿಂದ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳ ಸತತ ಪರಿಶ್ರಮದಿಂದಾಗಿ ಸಂಸ್ಥೆ ಪ್ರಗತಿಯತ್ತ ಸಾಗುತ್ತಿದೆಂದು ತಿಳಿಸಿ, ಸಂಸ್ಥೆ ಇನ್ನು ಅಭಿವೃದ್ದಿಯತ್ತ ಸಾಗಿಸಲು ಸತತ ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಅಭಿನಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.