ಈವರೆಗೆ ರಾಜ್ಯದಲ್ಲಿ 50 ಲಕ್ಷ ಜನರಿಗೆ ಲಸಿಕೆ

ಬೆಂಗಳೂರು, ಏ. 7- ರಾಜ್ಯದಲ್ಲಿ ಇದುವರೆಗೆ 50 ಲಕ್ಷ ಡೋಸ್ ಕೊರೊನಾ ಲಸಿಕೆ ‌ನೀಡಲಾಗಿದೆ.

ಮಧ್ಯಾಹ್ನ ದವರೆಗೆ ಒಟ್ಟು 45,13,857 ಜನರಿಗೆ ಮೊದಲನೇ ಡೋಸ್ ನೀಡಲಾಗಿದ್ದು, 5,02,838 ಜನ ಎರಡೂ ಡೋಸ್ ಪಡೆದಿದ್ದಾರೆ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ

ರಾಜ್ಯಾದ್ಯಂತ 5,564 ಸರ್ಕಾರಿ ಹಾಗೂ 609 ಖಾಸಗಿ ಸೇರಿದಂತೆ ಒಟ್ಟು 6,173 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ 3 ಹಂತದ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದ್ದು ರಾಜ್ಯದಲ್ಲಿ ಲಸಿಕೆ ನೀಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ದೇಶದಲ್ಲಿ ಇದುವರೆಗೂ 8 ಕೋಟಿಗೂ ಅಧಿಕ ಮಂದಿಗೆ ಲಸಿಕೆ ಹಾಕಲಾಗಿದೆ.