ನವದೆಹಲಿ,ಸೆ.೨೮- ದೇಶಾದ್ಯಂತ ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ (ನಫೆಡ್) ಸೂಚನೆ ನೀಡಿದೆ.
ಮಂಡಿಗಳಿಗೆ ಟ್ರಕ್‌ಗಳ ಮೂಲಕ ಸಾಗಿಸುವ ಮತ್ತು ಹರಾಜು ಮಾಡುವ ಬದಲು ಕೇಂದ್ರದ ಆನ್‌ಲೈನ್ ಇ-ನ್ಯಾಮ್ ಪ್ಲಾಟ್‌ಫಾರ್ಮ್ ಮೂಲಕ ಅದರ ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಕೃಷಿ ಸಹಕಾರಿ ಸಂಸ್ಥೆಗೆ ನಿರ್ದೇಶನ ನೀಡಿದೆ.
ಉತ್ತಮ ಬೆಲೆಯಲ್ಲಿ ಈರುಳ್ಳಿ ಮಾರಾಟ ಮಾಡಲು ಸಹಕರಿಸುವ ಜೊತೆಗೆ ಮಾರುಕಟ್ಟೆ ಮಧ್ಯಸ್ಥಿಕೆಗಾಗಿ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಸರ್ಕಾರ ಪಾವತಿಸುವ ವೆಚ್ಚ ಸಹ ಉಳಿಸುತ್ತದೆ.
ಇ-ನ್ಯಾಮ್ ಪ್ಲಾಟ್‌ಫಾರ್ಮ್ ಮೂಲಕ ಈರುಳ್ಳಿ ಹರಾಜು ಮಾಡುವುದರಿಂದ ಯಾವುದೇ ಹಸ್ತಕ್ಷೇಪ ಮತ್ತು ಪಕ್ಷಪಾತದ ನಿರ್ಧಾರ ನಿವಾರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಈರುಳ್ಳಿ ಖರೀದಿಸಿ ಸಂಗ್ರಹಿಸಿದ ನಂತರ ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡುವ ವೆಚ್ಚವನ್ನು ಸರಕಾರವೇ ಭರಿಸುತ್ತದೆ.
ಮತ್ತೊಂದು ಸರ್ಕಾರಿ ಘಟಕ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಪಂಜಾಬ್, ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಖರೀದಿದಾರರಿಗೆ ೯,೬೩೭ ಟನ್ ಈರುಳ್ಳಿಯನ್ನು ಇ-ನ್ಯಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿ ಮಾಡಿದ್ದು ನಾಸಿಕ್‌ನಿಂದ ತನ್ನ ಸ್ಟಾಕ್‌ನಿಂದ ಮಾರಾಟ ಮಾಡಿದೆ. ಈ ವೇದಿಕೆಯಲ್ಲಿ ದಾಖಲೆಯ ೧,೩೦೦ ಟನ್‌ಗಳನ್ನು ಮಾರಾಟ ಮಾಡಿದೆ.
“ನಾಫೆಡ್ ಮೊದಲು ಸಂಪೂರ್ಣ ದಾಸ್ತಾನನ್ನು ರಸ್ತೆ ಸಾರಿಗೆಯ ಮೂಲಕ ಗಮ್ಯಸ್ಥಾನ ಎಪಿಎಂಸಿ ಮಂಡಿಗೆ ವರ್ಗಾಯಿಸುತ್ತಿದೆ ಮತ್ತು ನಂತರ ಇ-ನ್ಯಾಮ್ ಭೌತಿಕ ಮಾರಾಟ ನಡೆಸುತ್ತಿದೆ ಎಂದು ತಿಳಿಸಲಾಗಿದೆ,
ಗಮ್ಯಸ್ಥಾನದ ಮಂಡಿಗಳ ದಾಸ್ತಾನುಗಳನ್ನು ಭೌತಿಕವಾಗಿ ಸಾಗಿಸುವ ಮತ್ತು ತರುವಾಯ ಅಲ್ಲಿ ಮಾರಾಟವನ್ನು ನಡೆಸುವ ಹಿಂದಿನ ಅಭ್ಯಾಸದ ವಿರುದ್ಧ ಈ ಅಭ್ಯಾಸ ಉತ್ತಮವಾಗಿದೆ ಎಂದು ಹೇಳಿದೆ,ಇ-ನ್ಯಾಮ್ ಮೂಲಕ ಸರಕುಗಳನ್ನು ಮಾರಾಟ ಮಾಡುವ ನಿರ್ದೇಶನ ರೈತರಿಗೆ ಅಥವಾ ಗ್ರಾಹಕರಿಗೆ ಯಾವುದೇ ಪರಿಹಾರ ನೀಡಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ವ್ಯಾಪಾರಿಗಳಿಗೆ ಮಾರಾಟ ಮಾಡುವ ಬದಲು ತಮ್ಮ ಮೂಲಕ ಚಿಲ್ಲರೆ ಮಾರಾಟಕ್ಕೆ ಹೋಗಬೇಕು. ರೈತರಿಗೆ ಉತ್ತಮ ಆದಾಯ ಸಿಗುತ್ತಿಲ್ಲ, ಗ್ರಾಹಕರಿಗೆ ಪರಿಹಾರ ಸಿಗುತ್ತಿಲ್ಲ. ಸರಳವಾಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಲಾಸಲ್‌ಗಾಂವ್‌ನ ಎಪಿಎಂಸಿ ನಿರ್ದೇಶಕ ಜಯದತ್ ಹೋಳ್ಕರ್ ಹೇಳಿದ್ದಾರೆ
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಸಭೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.