ಈರುಳ್ಳಿ ಬೆಳೆಗೆ ದೊರೆಯದ ಉತ್ತಮ ಬೆಲೆ

ಸಂಡೂರು:ಏ:4 ಪ್ರತಿವೋರ್ವ ರೈತ ತನ್ನ ಬುದ್ದಿಶಕ್ತಿಯಿಂದ ಬೆಳೆಯನ್ನು ಬೆಳೆದರೆ ರೈತ ಬೆಳೆಗಳ ಆಧಾರದ ಮೇಲೆ ಬೆಲೆಯನ್ನ ನಿರೀಕ್ಷಿಸಿ ಲಾಭ ಪಡೆಯಲು ಯಶಸ್ವಿಯಾಗಲು ಸಾಧ್ಯ. ಆದರೆ, ಒಬ್ಬ ರೈತ ಈರುಳ್ಳಿ, ಮಕ್ಕೆಜೋಳ, ಜೋಳ, ಶೇಂಗಾ ಬೆಳೆದರೆ, ಇನ್ನೊಬ್ಬರೈತ ಅದನ್ನೇ ಗುರಿಯನ್ನಾಗಿಟ್ಟುಕೊಂಡು ಈ ಬೆಳೆಗಳಲ್ಲಿ ಲಾಭಾಂಶವಿದೆ ಎನ್ನುವದನ್ನು ಗಮನದಲ್ಲಿಟ್ಟುಕೊಂಡು ಅದೇ ಬೆಳೆಯನ್ನ ಬೆಳೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾನೆ. ಆದರೆ, ಅವನ ವಾಸ್ತವ ಅಂಶ, ಸಫಲವಾಗದೇ ವಿಫಲವಾದಾಗ ಬೆಳೆ ಕೈಗೆ ಎಟುಕದಾಗ ನಿರೀಕ್ಷೆಯಂತೆ ದರ ಕಡಿಮೆಯಾಗಿ ಬೆಳೆಗೆ ತಾನು ಖರ್ಚು ಮಾಡಿದ ಮೊತ್ತಕ್ಕಿಂತ ತನಗೆ ಹಣ ದೊರೆಯದೇ ತಂದ ಹಣಕ್ಕೆ ಬಡ್ಡಿ ಕಟ್ಟದೇ ಆಗಧೇ ಇರಲು ಪಶ್ಚಾತಾಪ ಪಡೆಯಲು ಸಾಧ್ಯ. ಇಂಥಹ ಹಲವಾರು ಘಟನಗಳು ಜಗತ್ತಿನಾಧ್ಯಂತ ನಡೆದು ಇಂಥಹದೊಂದು ಪ್ರಸಂಗ ಭುಜಂಗನಗರ, ಲಕ್ಷ್ಮೀಪುರ ಗ್ರಾಮಗಳಲ್ಲಿ ರೈತರಿಗೆ ಮುಜುಗರ ಉಂಟಾಗಿದ್ದು, ಕೆಲ ತಿಂಗಳ ಹಿಂದೆ 1 ಕೆ.ಜಿ. ಈರುಳ್ಳಿಗೆ 80 ರಿಂದ 100ರೂ. ಇದ್ದು, ಕ್ವಿಂಟಲ್ ಈರುಳ್ಳಿಗೆ 900 ರಿಂದ 1000 ದರ ಇದ್ದು ಉತ್ತಮ ದರದಲ್ಲಿದ್ದ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಾಶೆಯಾಗಿದ್ದು, ಈಗಿನ ದರಕ್ಕೆ ಮಾರಾಟ ಮಾಡಿದರೆ, ಖರ್ಚುಕೂಡಾ ಬರುವುದಿಲಲ. ಎನ್ನುವ ಮಾತನ್ನ ಭುಜಂಗನಗರದ ರೈತ ಹೆಚ್.ಕೆ. ಮಲ್ಲಿಕಾರ್ಜುನ ಹೇಳುವುದು ಅನಿವಾರ್ಯವಾಗಿದೆ.
ಮೂರು ಎಕರೆ ಬೆಳೆದಿದ್ದೇನೆ : ಉತ್ತಮ ಮುಂಗಾರು ಮಳೆಯಿಂದ ಕೊಳವೆ ಬಾವಿಗಳು ಪುನಶ್ಚೇತನ ಗೊಂಡ ಕಾರಣ ಹೆಚ್ಚಿನ ರೈತ ಬಾಂಧವರು ಈರುಳ್ಳಿ ಬೆಳೆ ಬೆಳೆಯಲು ಮುಂದಾಗಿದ್ದು, 1 ಎಕರೆ ಬೆಳೆಯಲು 40 ರಿಂದ 50 ಸಾವಿರ ಖರ್ಚಾಗುತ್ತಿರುವುದು ಪ್ರತಿವೋರ್ವ ರೈತನಿಗೆ ಆತಂಕ ಉಂಟು ಮಾಡಿದೆ. 1 ಎಕರೆಗೆ 12 ರಿಂದ 14 ಟನ್ ಫಸಲು ಖಚಿತ ನಾನು ಸಹಾ 3 ಎಕರೆಯಲ್ಲಿ ಬೆಳೆ ಬೆಳೆದಿದ್ದೇನೆ. ಪುನಾ ಈರುಳ್ಳಿ ಥಳಿಗಿಂತ ಸ್ವಲ್ಪ ಚಿಕ್ಕ ಗಾತ್ರವಾಗಿದ್ದರೂ, ರುಚಿಗೆ ನಮ್ಮ ಈರುಳ್ಳಿ ಹೆಸರಾಗಿದೆ. ಇನ್ನೊಂದು ವಿಶೇಷತೆ ಏನೆಮದರೆ ಹಲವು ತಿಂಗಳು ಈರುಳ್ಳಿಯನ್ನ ಕೊಟಗಿಯಲ್ಲಿ ಸಂಗ್ರಹಿಸಿ ಇಟ್ಟರೂ ಏನು ತೊಂದರೆಯಿಲ್ಲ. ಪ್ರತಿಬಾರಿ 500 ರೂ. ರಿಂದ 600 ವರೆಗೆ ಮಾರಾಟ ವಾಗುತ್ತಿದ್ದ ಬೀಜ 2200 ವರೆಗೆ ಮಾರಾಟ ವಾಗುತ್ತಿದ್ದು, ರೈತನ ಗೋಳು ಹೇಳತೀರದು ಎಂದು ಲಕ್ಷ್ಮೀಪುರದ ರೈತ ಬಿ.ಎಂ. ಉಜ್ಜಿನಯ್ಯ ನವರು ತಿಳಿಸಿದರು.
3500 ಹೆಕ್ಟರ್ ಬೆಳೆ : ಬಳ್ಳಾರಿ ರೆಡ್ ಎಂದು ಕರೆಯಲ್ಪಿಡುವ ಸ್ಥಳೀಯ ಈರುಳ್ಳಿ ಕೊಯಿಲೆ ಪ್ರಾರಂಭವಾಗಿದ್ದು, 2019-20ನೆ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ 495 ಹೆಕ್ಟೇರ್ ಈರುಳ್ಳಿ ಬೆಳೆ ಬೆಳೆಯಲಾಗಿದ್ದು, ಕಳೆದ ವರ್ಷ ಉತ್ತಮ ಮುಂಗಾರು ಮಳೆಯಿಂದಾಗಿ ತಾಲ್ಲೂಕಿನ ಸಂಡೂರು, ದೌಲತ್‍ಪುರ, ತಾರಾನಗರ, ಕೃಷ್ಣಾನಗರ ಹೀಗೆ ಹಲವಾರು ಗ್ರಾಮೀಣ ಭಾಗದಲ್ಲಿ ಒಟ್ಟು 3500 ಹೆಕ್ಟರ್ ಬೆಳೆ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಬೆಳೆದ ಬೆಳೆಗೆ ದರ ಕುಸಿದಿರುವುದು ರೈತರಿಗೆ ಆತಂಕ ಉಂಟುಮಾಡಿ ಚಿಂತೆ ಉಂಟಾಗಿದೆ.