ಈರುಳ್ಳಿ ಬೆಳೆಗಾರರ ಸಂಘದ ಪೂರ್ವಭಾವಿ ಸಭೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ನ.22: ಪಟ್ಟಣದ ಪ್ರವಾಸಿ ಮಂದಿರದಲ್ಲಿ  ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ  ರಾಜ್ಯ ಅಧ್ಯಕ್ಷರಾದ ಎನ್ ಎಂ ಸಿದ್ದೇಶ್, ಕರ್ನಾಟಕ ರಾಜ್ಯ ರೈತರ ಸಂಘದ ಉಪಾಧ್ಯಕ್ಷರ ಭರ್ಮಣ್ಣ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು
ಈ ಸಭೆಯಲ್ಲಿ  ಕೊಟ್ಟೂರು ತಾಲೂಕಿನಾದ್ಯಂತ ಮಳೆಯಿಂದಾಗಿ ಈರುಳ್ಳಿ ಬೆಳೆದ ಬೆಳೆಗಾರರು ಕಂಗಾಲಗಿದ್ದಾರೆ, ಈರುಳ್ಳಿ ಬೆಳೆಗಾರರಿಗೆ ತ್ವರಿತ ಗತಿಯಲ್ಲಿ ಬೆಳೆ ಪರಿಹಾರವನ್ನು ಒದಗಿಸಬೇಕು, ಮಳೆ ಹೆಚ್ಚಾಗಿದ್ದರಿಂದ ರೈತರ ಈರುಳ್ಳಿ ಎಲ್ಲಾ ನಾಶಗೊಂಡಿದೆ, ರೈತರು ಈರುಳ್ಳಿ ಬೆಳೆಗೆ ವಿಮೆ ಕಟ್ಟಿದ್ದು, ಈ ವಿಮೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ, ಈ ವಿಮೆಯನ್ನು ಆದಷ್ಟು ಬೇಗ  ಒದಗಿಸಬೇಕು ಮತ್ತು ಬೆಳೆ ಪರಿಹಾರವನ್ನು ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ  ಸಂಘಟನೆಗಳು ಒಗ್ಗೂಡಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಭರ್ಮಣ್ಣ ಮತ್ತು ಈರುಳ್ಳಿ ಬೆಳೆಗಾರರ ಸಂಘ ರಾಜ್ಯಾಧ್ಯಕ್ಷರಾದ ಸಿದ್ದೇಶ್ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಈರುಳ್ಳಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷರಾದ ಉಮೇಶ್, ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಕಾರ್ಯದರ್ಶಿಯಾದ ಮಂಜುನಾಥ್, ರಮೇಶ್, ಮೌನೇಶ್, ಸಿದ್ದೇಶ್, ಭದ್ರಗೌಡ, ಈರಣ್ಣ, ಹಾಗೂ  ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಗೌರವಾಧ್ಯಕ್ಷರಾದ ಕೊಟ್ರೇಶಪ್ಪ, ತಾಲೂಕು ಅಧ್ಯಕ್ಷರಾದ ನಾಗರಾಜ್ ಇತರರು ಉಪಸ್ಥಿತರಿದ್ದರು