ಈರುಳ್ಳಿ ಬೆಲೆ ಕುಸಿತ ರೈತರಲ್ಲಿ ಕಣ್ಣೀರು

ಹಗರಿಬೊಮ್ಮನಹಳ್ಳಿ.ಮಾ.೨೮ ಕಳೆದ 6 ತಿಂಗಳ ಹಿಂದೆ ಗಗನಕ್ಕೇರಿದ ಈರುಳ್ಳಿ ದರ ಈಗ ದಿಡೀರನೆ ಕುಸಿತವುಂಟಾಗಿ ರೈತರ ಕಣ್ಣಲ್ಲಿ ನೀರು ತರಿಸಿದೆ.
ಕಳೆದ ವರ್ಷ ಮಳೆಯಿಂದಾಗಿ ರೋಗ ಹೆಚ್ಚಾಗಿ ಈರುಳ್ಳಿ ಬೆಳೆಗಾರರು ತೊಂದರೆ ಅನುಭವಿಸಿದರು. ಈ ವರ್ಷ ಇಳುವರಿ ಚೆನ್ನಾಗಿ ಬಂದರು ಬೆಲೆ ಸಿಗದೆ ಕಂಗಾಲಾಗಿದ್ದಾರೆ. ರೈತರು ಈರುಳ್ಳಿ ಬೆಳೆಯಲು ಗೊಬ್ಬರ ಕಳೆವು ಅಂತಹ ಸಾವಿರಾರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಈರುಳ್ಳಿಯನ್ನು ಬೆಳೆಯಲು ಹಗಲು ರಾತ್ರಿ ಶ್ರಮಪಟ್ಟರು ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗದೇ ಇರುವುದರಿಂದ ರೈತರು ನಂಬಿದ ವ್ಯವಸಾಯ ಮೂರು ಕಾಸಿನ ಕಿಮ್ಮತ್ತ್ ಸಿಗುತ್ತಿಲ್ಲ. ಯಾವ ಬೆಳೆ ಬೆಳೆದರೂ ರೈತರಿಗೆ ಬೆಂಬಲ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ತಮ್ಮ ಹೊಲದಲ್ಲಿ ನಾಟಿ ಮಾಡಿ ಬೆಳೆಯನ್ನು ಚೆನ್ನಾಗಿ ಬೆಳೆಸಿ ಕಾಪಾಡಿದ್ದಾರೆ ಅವರು ಒಳ್ಳೆಯ ಬೆಲೆ ಸಿಗುತ್ತದೆ ಎಂದು ಕನಸು ಕಾಣುವ ಮುಂಚೆಯೇ ದಿಡೀರ್ ಕುಸಿತದಿಂದ ರೈತರು ಕನಸು ನುಚ್ಚುನೂರಾಗಿದೆ ಈಗಾಗಲೇ ಈ ಭಾಗದಲ್ಲಿ 250 ಹೆಕ್ಟರ್ ಈರುಳ್ಳಿ ಬೆಳೆಯಲಾಗಿದೆ ಎಂದು ತೋಟಗಾರಿಕೆಯ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ತಿಳಿಸಿದರು. ಈರುಳ್ಳಿ ಬೆಲೆ ಕುಸಿತಕ್ಕೆ ಕಾರಣ ಸ್ಟಾಕ್ ಮಾಡಲಾಗಿರುವ ಹಳೆ ಈರುಳ್ಳಿಯನ್ನು ಮಾರ್ಕೆಟಿಗೆ ಬಿಡಲಾಗಿದೆ ಜೊತೆಗೆ ಹೊಸ ಈರುಳ್ಳಿ ಬಂದಿರುವುದರಿಂದ ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳುತ್ತಾರೆ. ಈರುಳ್ಳಿ ಒಮ್ಮೊಮ್ಮೆ ಗ್ರಾಹಕರಲ್ಲಿ ಕಣ್ಣೀರು ತರಿಸಿದರೆ ಒಮ್ಮೊಮ್ಮೆ ರೈತರಲ್ಲಿ ಕಣ್ಣೀರು ತರಿಸುತ್ತದೆ.

ಬೆಲೆ ಸಿಗುತ್ತದೆ ಎಂಬ ಆಸೆಯಿಂದ ಈರುಳ್ಳಿಯನ್ನು ಬೆಳೆಯಲಾಯಿತು ಕಳೆದ ವರ್ಷ ರೋಗಭಾದೆಯಿಂದ ಈರುಳ್ಳಿ ರೈತರಿಗೆ ದಕ್ಕದೆ ನಾಶವಾಗಿತ್ತು. ಈ ಬಾರಿ ಬೆಳೆ ಬಂದರು ಬೆಲೆ ಕಡಿಮೆ ಆಗಿದೆ ನಾವು ಮಾಡಿರುವ ಖರ್ಚು ನಮಗೆ ಸಿಗುವುದು ಗ್ಯಾರಂಟಿ ಇಲ್ಲ ರೈತಮರಿ ಕೊಟ್ರಪ್ಪ