ಈರುಳ್ಳಿ ಬೆಲೆ ಕುಸಿತ ಖಂಡಿಸಿ ರೈತರ ಪ್ರತಿಭಟನೆ

ಜಗಳೂರು.ಸೆ.೧೯: ಈರುಳ್ಳಿ ಬೆಲೆ ಗಣನೀಯವಾಗಿ ಕುಸಿದಿದ್ದು ಕನಿಷ್ಟ ಬೆಂಬಲ ಬೆಲೆಯನ್ನು ಈ ಕೂಡಲೇ ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಿAದ ತಾಲೂಕು ಕಛೇರಿಯವರೆಗೂ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ವತಿಯಿಂದ ಪ್ರತಿಭಟನೆಯ ಮೂಲಕ ತೆರಳಿ ತಹಶೀಲ್ದಾರ್ ಡಾ.ನಾಗವೇಣಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕೇಂದ್ರ ಸರಕಾರವು ಪ್ರತಿ ವರ್ಷ ರೈತರು ಬೆಳೆಯುವ 23 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಎಂಎಸ್‌ಪಿ ಘೋಷಿಸುತ್ತದೆ ಅದರಲ್ಲಿ ಮೆಕ್ಕೆಜೋಳ, ಭತ್ತ, ರಾಗಿ, ಶೇಂಗಾ, ಹತ್ತಿ, ಸೂಂiÀiðಕಾAತಿ ಇವುಗಳು ಸೇರಿದ್ದು ಮೆಕ್ಕೆಜೋಳಕ್ಕೆ 1860 ಮತ್ತು ಸೂರ್ಯಕಾಂತಿಗೆ 6,015 ರೂಗಳನ್ನು ಘೋಷಣೆ ಮಾಡಿದೆ ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಪನಿ ಖರೀದಿದಾರರು ಮತ್ತು ಖಾಸಗಿ ಖರೀದಿದಾರರು ಮೆಕ್ಕೆಜೋಳಕ್ಕೆ 1,400, ಸೂರ್ಯಕಾಂತಿಗೆ 5 ಸಾವಿರ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ಧರದಲ್ಲಿ ಖರೀದಿಸುವುದರಿಂದ ರೈತರಿಗೆ ನಷ್ಟವಾಗುತ್ತಿದ್ದು 50 ಕ್ವಿಂಟಾಲ್ ಬೆಳೆದ ರೈತನಿಗೆ 46 ಸಾವಿರದಷ್ಟು ನಷ್ಟವಾಗಲಿದೆ ಆದ್ದರಿಂದ ಎಂಎಸ್‌ಪಿ ಕಾನೂನು ಬದ್ಧ ಕಾಯ್ದೆಯನ್ನು ಜಾರಿ ಮಾಡಬೇಕು ಮತ್ತು ಕಡಿಮೆ ಬೆಲೆಗೆ ಖರೀದಿಸುವ ಖಾಸಗಿ ಖರೀದಿದಾರರ ಲೈಸನ್ಸ್ ರದ್ದುಪಡಿಸಿ 23 ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆAದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ಚಿರಂಜೀವಿ, ಜಿಲ್ಲಾ ಕಾರ್ಯದರ್ಶಿ ಸತೀಶ್, ಎಂ.ಶರಣಪ್ಪ, ರಾಜು, ಪ್ರಹ್ಲಾದಪ್ಪ, ನಾಗರಾಜ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.