ಈರುಳ್ಳಿ ಬೆಂಬಲ ಬೆಲೆಗೆ ಒತ್ತಾಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.19 ನಿರಂತರ ಈರುಳ್ಳಿ ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅವರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸುತ್ತೇನೆ  ಎಂದು ಶಾಸಕ ಕೆ ನೇಮಿರಾಜ್ ನಾಯಕ್ ಹೇಳಿದರು.
 ಕರ್ನಾಟಕ  ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ಈರುಳ್ಳಿ ಬೆಳೆಯಿಂದ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟ ರೈತರು ಅನುಭವಿಸುತ್ತಿದ್ದಾರೆ. ಅವರಿಗೆ ಸೂಕ್ತವಾದ ಬೆಂಬಲ ಬೆಲೆ ಜೊತೆಗೆ ಪರಿಹಾರವನ್ನು ಕಲ್ಪಿಸುವಂತೆ ಸದನದಲ್ಲಿ ಒತ್ತಾಯಿಸುತ್ತೇನೆ ಜೊತೆಗೆ  ಬೆಳೆಗಾರರ ಸಂಘಕ್ಕೆ ನಿವೇಶನ ಕೊಟ್ಟು ಕಚೇರಿ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಎನ್ಎಂ ಸಿದ್ದೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಚ್ ಉಮೇಶ್ ಸದಸ್ಯರಾದ ಮೈನಹಳ್ಳಿ ಕೊಟ್ರೇಶ್ ತಾಲೂಕು ಅಧ್ಯಕ್ಷರಾದ ಮೋಹನ್ ರೆಡ್ಡಿ  ತಾಲೂಕು ಗೌರವ ಅಧ್ಯಕ್ಷ ಕಿನ್ನಾಳ ಸುಭಾಷ್ ಬನ್ನಿಗೋಳ ವೆಂಕಣ್ಣ ವಿಜಯನಗರ ಜಿಲ್ಲಾಧ್ಯಕ್ಷ ಅರ್ತಿ ಪ್ರಕಾಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವ ಚಿಂದಿಗರ ಕೊಟ್ರೇಶ್  ಕೊಟ್ರೇಶ್  ಎನ್ ಸಿ ಚೆನ್ನಬಸಪ್ಪ  ಇನ್ನೂ ಅನೇಕ ರೈತ ಮುಖಂಡರು ಇದ್ದರು