ಈರುಳ್ಳಿ ಪಕೋಡ

ಈರುಳ್ಳಿ: ಎರಡು
ಕಡ್ಲ ಹಿಟ್ಟು: ಅರ್ಧ ಕಪ್
ಖಾರದ ಪುಡಿ : ಒಂದು ಟೀ ಚಮಚ
ಅಕ್ಕಿ ಹಿಟ್ಟು : ಒಂದು ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು, ಇಂಗು ಸ್ವಲ್ಪ
ಉಪ್ಪು- ರುಚಿಗೆ ತಕ್ಕಟ್ಟು
ನೀರು : ಅರ್ಧ ಕಪ್
ಎಣ್ಣೆ ಕರಿಯಲು
ಈರುಳ್ಳಿಯನ್ನು ತೆಗೆದುಕೊಂಡು ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತೆಗೆಯಿರಿ. ಈರುಳ್ಳಿಯ ಅರ್ಧ ಭಾಗಮಾಡಿಕೊಂಡು ಕತ್ತರಿಸಿ. ತೆಳುವಾಗಿ ಹಾಗೂ ಉದ್ದುದ್ದವಾಗಿ ಕತ್ತರಿಸಿ. ಮಿಶ್ರಣದ ಪಾತ್ರೆಗೆ ವರ್ಗಾಯಿಸಿ. ಈರುಳ್ಳಿ ಚೂರುಗಳ ಪದರವನ್ನು ಬಿಡಿಸಿಕೊಳ್ಳಿ. ಕಡ್ಲೆ ಹಿಟ್ಟನ್ನು ಮಿಶ್ರಣದ ಪಾತ್ರೆಗೆ ಸೇರಿಸಿ. ಅಕ್ಕಿ ಹಿಟ್ಟು ಮತ್ತು ಖಾರದ ಪುಡಿಯನ್ನು ಸೇರಿಸಿ. ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಇಂಗನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ. ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತ ದಪ್ಪದಾದ ಹಿಟ್ಟಿನ ಮಿಶ್ರಣವನ್ನಾಗಿ ಮಾಡಿ. ಚಿಕ್ಕ ಪಾತ್ರೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ. ಎರಡು ನಿಮಿಷ ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಕರಿಯಲು ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿ ಆಗಿದೆಯೇ ಎಂದು ಪರೀಕ್ಷಿಸಲು ಚಿಕ್ಕ ಈರುಳ್ಳಿ ತುಂಡನ್ನು ಬಿಡಿ. ಎಣ್ಣೆಯಲ್ಲಿ ಬಿಟ್ಟ ಚೂರು ಗುಳ್ಳೆಗಳೊಂದಿಗೆ ಮೇಲೆ ಬಂದರೆ, ಎಣ್ಣೆ ಕರಿಯಲು ಸಿದ್ಧವಾಗಿದೆ ಎಂದರ್ಥ. ಒಂದು ಚಮಚದ ಸಹಾಯದಿಂದ ಹಿಟ್ಟನ್ನು ಎಣ್ಣೆಯಲ್ಲಿ ಒಂದಾದ ಮೇಲೊಂದರಂತೆ ಬಿಡಬೇಕು. ನಿಮ್ಮ ಕೈಯಿಂದಲೂ ಸಹ ಹಿಟ್ಟನ್ನು ಎಣ್ಣೆಗೆ ಬಿಡಬಹುದು.ಮಧ್ಯಮ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ಎರಡು ಭಾಗದಲ್ಲೂ ಚೆನ್ನಾಗಿ ಬೇಯಲು ಸರಿಯಾಗಿ ತಿರುವಿ.ಎರಡು ಭಾಗದಲ್ಲೂ ಹೊಂಬಣ್ಣ ಬರುವವರೆಗೂ ಬೇಯಿಸಿ.