
ನವದೆಹಲಿ, ಮಾ. ೮- ದೇಶಾದ್ಯಂತ ಈರುಳ್ಳಿ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರಿಂದ ಈರುಳ್ಳಿ ಖರೀದಿಸುವಂತೆ ಏಜೆನ್ಸಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಈರುಳ್ಳಿ ಖರೀದಿ ಮತ್ತು ಏಕಕಾಲದಲ್ಲಿ ರವಾನೆ ಮತ್ತು ಮಾರಾಟಕ್ಕಾಗಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿರುವ ಕೇಂದ್ರ ಸರ್ಕಾರ ಏಜೆನ್ಸಿಗಳಿಗೆ ನಿರ್ದೇಶನ ನೀಡಿ ಈರುಳ್ಳಿ ಖರೀದಿಸುವಂತೆ ನಿರ್ದೇಶಿಸಿದೆ.
ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ (ಎನ್‌ಸಿಸಿಎಫ್‌ಗೆ) ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕುಸಿಯುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಮುಂದೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಕಡಿಮೆ ಅವಧಿಯಲ್ಲಿ ಈರುಳ್ಳಿ ಪೂರೈಕೆಯನ್ನು ಸುಗಮವಾಗಿಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈರುಳ್ಳಿ ಸಂಗ್ರಹಣೆ ಮತ್ತು ಶೇಖರಣೆಗಾಗಿ ಸರ್ಕಾರ ಬೆಲೆ ಸ್ಥಿರೀಕರಣ ನೀತಿಯನ್ನು ಬಳಸಲು ಮುಂದಾಗಿದೆ.
ಕಳೆದ ೧೦ ದಿನಗಳಲ್ಲಿ ಎನ್‌ಎಎಫ್‌ಇಡಿ ರೈತರಿಂದ ಪ್ರತಿ ೧೦೦ ಕೆ.ಜಿ. ಗೆ ೯೦೦ ರೂ.ಗಿಂತ ಹೆಚ್ಚಿನ ದರದಲ್ಲಿ ಅಂದಾಜು ೪ ಸಾವಿರ ಟನ್ ಈರುಳ್ಳಿ ಖರೀದಿಸಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್ ಗಾಂವ್ ಮಂಡಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ೧ ರಿಂದ ೨ ರೂ. ಅಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಎನ್‌ಎಎಫ್‌ಇಡಿ ಸಚಿವಾಲಯ ಮಾಹಿತಿಯನ್ವಯ ಈರುಳ್ಳಿ ಖರೀದಿಗಾಗಿ ೪೦ ಖರೀದಿ ಕೇಂದ್ರಗಳನ್ನು ತೆರೆಂiiಲಾಗಿದೆ. ರೈತರು ತಮ್ಮ ದಾಸ್ತಾನನ್ನು ಕೇಂದ್ರಗಳಲ್ಲಿ ಮಾರಾಟ ಮಾಡಿ, ಆನ್‌ಲೈನ್ ಮೂಲಕ ಹಣ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ದೆಹಲಿ, ಕೊಲ್ಕತ್ತ, ಗುವಾಹಟಿ, ಭುವನೇಶ್ವರ್, ಚೆನ್ನೈ, ಹೈದರಾಬಾದ್ ಸೇರಿದಂತೆ ಬೆಂಗಳೂರು ನಗರದಲ್ಲಿಯೂ ಈರುಳ್ಳಿ ಖರೀದಿ ಕೇಂದ್ರಗಳಿಂದ ಸಾಗಾಣೆಗೆ ವ್ಯವಸ್ಥೆಯನ್ನು ಎನ್‌ಎಎಫ್‌ಇಡಿ ವ್ಯವಸ್ಥೆ ಮಾಡಿದೆ.
ಸಚಿವಾಲಯ ಮಾಹಿತಿಯನ್ವಯ ೨೦೨೨-೨೩ ರಲ್ಲಿ ಅಂದಾಜು ೩೧೮ ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಿದೆ. ಕಳೆದ ವರ್ಷದ ಉತ್ಪಾದನೆಗಿಂತ ಪ್ರಸಕ್ತ ಸಾಲಿನ ಉತ್ಪಾದನೆ ಹೆಚ್ಚಾಗಿದೆ.
ಬೇಡಿಕೆ ಮತ್ತು ಸರಬರಾಜು ಮತ್ತು ರಫ್ತು ಸಾಮರ್ಥ್ಯ ಸ್ಥಿರತೆಯಿಂದಾಗಿ ಬೆಲೆಗಳು ಸಹ ಸ್ಥಿರವಾಗಿದ್ದರೂ ಕಳೆದ ಫೆಬ್ರವರಿಯಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ಪ್ರಮುಖವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ ೫೦೦ಕ್ಕೆ ಇಳಿಕೆಯಾಗಿದೆ. ಇತರ ರಾಜ್ಯಗಳಿಗೆ ಇತರ ರಾಜ್ಯಗಳಲ್ಲಿ ಈ ಬಾರಿ ಈರುಳ್ಳಿ ಉತ್ಪಾದನೆ ಹೆಚ್ಚಾಗಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಪ್ರಮುಖ ಈರುಳ್ಳಿ ಉತ್ಪಾದನಾ ಜಿಲ್ಲೆಯಾದ ನಾಸಿಕ್‌ನಿಂದ ಈರುಳ್ಳಿ ಅವಲಂಬನೆಯನ್ನು ಉತ್ಪಾದನಾ ಹೆಚ್ಚಳ ಹಿನ್ನೆಲೆಯಲ್ಲಿ ಕಡಿಮೆ ಮಾಡಲಾಗಿದೆ.
ದೇಶದ ಎಲ್ಲ ರಾಜ್ಯಗಳಲ್ಲೂ ಈರುಳ್ಳಿ ಬೆಲೆಯನ್ನು ಬೆಳೆಯಲಾಗುತ್ತದೆ. ಒಟ್ಟು ಈರುಳ್ಳಿಯ ಉತ್ಪಾದನೆಯ ಶೇಕಡ ೪೩ ರಷ್ಟು ಪಾಲು ಮಹಾರಾಷ್ಟ್ರ ರಾಜ್ಯವೇ ಹೊಂದಿದೆ. ಮಧ್ಯಪ್ರದೇಶ ಶೇ. ೧೬, ಕರ್ನಾಟಕ ಮತ್ತು ಗುಜರಾತ್ ರಾಷ್ಟ್ರೀಯ ಉತ್ಪಾದನೆಯಲ್ಲಿ ಶೇ. ೯ ರಷ್ಟು ಪಾಲನ್ನು ಹೊಂದಿವೆ.
ರಾಷ್ಟ್ರೀಯ ಈರುಳ್ಳಿ ಉತ್ಪಾದನೆಯ ಅಂದಾಜು ೭೨ ರಿಂದ ೭೫ ಪ್ರತಿಶತ ಪ್ರಮಾಣ ಬೆಳೆಯ ಅನುಕೂಲಕರ ವಾತಾವರಣ ಸಂದರ್ಭದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.
ದೇಶದಾದ್ಯಂತ ವರ್ಷವಿಡೀ ಸಂಗ್ರಹಿಸಿರುವ ಈರುಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆದರೆ ವೈಫರಿತ್ಯ ವಾತಾವರಣದಿಂದ ಈರುಳ್ಳಿ ದಾಸ್ತಾನು ಹಾನಿಗೊಳಗಾಗಿರುವ ಸಂದರ್ಭವಿದೆ.
ಕಳೆದ ವರ್ಷ ಎನ್‌ಎಎಫ್‌ಇಡಿ ೨.೫೧ ಲಕ್ಷ ಟನ್ ಈರುಳ್ಳಿ ದಾಸ್ತಾನು ಸಂಗ್ರಹಿಸಲಾಗಿತ್ತು. ಸದ್ಯ ೨.೫ ಲಕ್ಷ ಟನ್ ದಾಸ್ತಾನನ್ನು ನಿರ್ವಹಣೆ ಮಾಡಲು ಸರ್ಕಾರ ನಿರ್ಧರಿಸಲಿದೆ.
ಈರುಳ್ಳಿ ದಾಸ್ತಾನುನಿಂದ ಮಾರುಕಟ್ಟೆಯಲ್ಲಾಗುವ ದರಗಳ ಏರುಪೇರುಗಳನ್ನು ಸ್ಥಿರವಾಗಿಡಲು ಸಾಧ್ಯವಾಗಲಿದೆ. ರಫ್ತು ನೀತಿಯಲ್ಲಿ ಸ್ಥಿರತೆಯನ್ನು ಕಾಪಾಡುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಈರುಳ್ಳಿಗೆ ಉತ್ತಮ ರಫ್ತು ಮಾರುಕಟ್ಟೆಯನ್ನು ಖಚಿತ ಪಡಿಸುವುದನ್ನು ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಕುಸಿದ ಈರುಳ್ಳಿ ಬೆಲೆ.
ರೈತರಿಂದ ಈರುಳ್ಳಿ ಖರೀದಿಸಲು ನಿರ್ದೇಶನ.
ಎನ್‌ಎಎಫ್‌ಇಡಿ, ಎನ್‌ಸಿಸಿಎಫ್‌ಗೆ ಸರ್ಕಾರ ಸೂಚನೆ.
ಬೆಂಗಳೂರು ಸೇರಿದಂತೆ ಇತರ ರಾಜ್ಯಗಳಿಂದ
ದಾಸ್ತಾನು ಸಾಗಾಣೆಕೆಗೆ ಎನ್‌ಎಎಫ್‌ಇಡಿ ವ್ಯವಸ್ಥೆ.
೨೦೨೨-೨೩ ಅಂದಾಜು ಈರುಳ್ಳಿ ಉತ್ಪಾದನೆ ೩೧೮ ಲಕ್ಷ ಟನ್.
ಉತ್ಪಾದನೆ, ಮಹಾರಾಷ್ಟ್ರದ್ದು ಸಿಂಹ ಪಾಲು.
ಕರ್ನಾಟಕ, ಗುಜರಾತ್ ಶೇ. ೯.
ಮಧ್ಯಪ್ರದೇಶ ಶೇ. ೧೬.