ಈರಮ್ಮ ಗುರುಸ್ವಾಮಿ ಅವರಿಗೆ ಸಾಹಿತ್ಯ ಶಿರೋಮಣಿ ಪ್ರಶಸ್ತಿ

ಕಲಬುರಗಿ,ಸೆ.16-ತಾಲೂಕಿನ ಫರಹತಬಾದ ಸಮೀಪದ ಕೇಸರಿ ಬೆಟ್ಟದಲ್ಲಿ 29 ನೇ ತಪೆÇೀನಷ್ಠಾನದ ನಾಲ್ಕನೇ ಮಹಾಪೂಜೆ ಸಮಾರಂಭದಲ್ಲಿ ಸಾಂಬ ಸಲಗರದ ಪೀಠಾಧಿಪತಿಗಳಾದ ದ್ವಿತೀಯ ಸಾಂಬಾ ಶಿವಾಚಾರ್ಯರು ಖ್ಯಾತ ಬರಹಗಾರ್ತಿ ಈರಮ್ಮ ಗುರುಸ್ವಾಮಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ “ಸಾಹಿತ್ಯ ಶಿರೋಮಣಿ ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈರಮ್ಮ ಗುರುಸ್ವಾಮಿಯವರು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನಾಡಿನಲ್ಲಿ ಹೇಸರು ಮಾಡಿದ್ದಾರೆ. ಸಾಂಬ ಶಿವಯೋಗಿಶ್ವರರ ಆಶೀರ್ವಾದ ಅವರ ಮೇಲಿದೆ. ಮುಂಬರುವ ದಿನಗಳಲ್ಲಿ ಸಾಹಿತ್ಯ ಮತ್ತು ಸಂಗೀತದಿಂದ ಸಮಾಜ ತಿದ್ದುವ ಮತ್ತು ಸಂಗೀತವನ್ನು ಉಣಬಿಡಿಸಿ ಸಮಾಜಕ್ಕೆ ಬೆಳಕು ಚೆಲ್ಲುವಂತವಾಗಬೇಕು ಎಂದು ವಿ.ಕೆ.ಸಲಗರ ಶ್ರೀಗಳು ಆಶೀರ್ವದಿಸಿದ್ದರು.
ಸಂದರ್ಭದಲ್ಲಿ ಸಂಗೀತಗಾರ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಇದ್ದರು.