ಈರಣ್ಣ ಸಿನ್ನಾನಪಲ್ಲೇ ರಿಂದ ಮಾಸ್ಕ, ಸಾನಿಟೈಸರ್ ವಿತರಣೆ

ರಾಯಚೂರು.ಜೂ.೭- ನಗರದ ಮಾರ್ಕೆಟ್ ಯಾರ್ಡ ಪೋಲಿಸ್ ಠಾಣೆಯಲ್ಲಿ ಕರೋನಾ ವಾರಿಯರ್ಸ್‌ರಾಗಿ ಕಾರ್ಯನಿರ್ವಾಹಿಸುತ್ತಿರುವ ಪೋಲಿಸ್ ಸಿಬ್ಬಂದಿಯವರಿಗೆ ಭೋವಿ ಸಮಾಜದ ಯುವ ಮುಖಂಡರಾದ ಈರಣ್ಣ ಸಿನ್ನಾನಪಲ್ಲೇ ಇವರಿಂದ ಮಾಸ್ಕ, ಸಾನಿಟೈಸರ್ ವಿತರಿಸಲಾಯಿತು.
ನಂತರ ಮಾತನಾಡಿ, ಕೊರೊನಾ ಸಂಕಷ್ಟ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನರ ಆರೋಗ್ಯ ಕಾಪಾಡುವ ಸಲುವಾಗಿ ಪೋಲಿಸ್ ಇಲಾಖೆಯ ಸಿಬ್ಬಂದಿಯು ತಮ್ಮ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಶ್ರಮದಿಂದಾಗಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪೋಲಿಸ್ ಠಾಣೆಯ ಪಿ.ಎಸ್.ಐ ಹುಸೇನಪ್ಪ ನಾಯಕ ಹಾಗೂ ಠಾಣೆಯ ಸಿಬ್ಬಂದಿಯು ಸೇರಿದಂತೆ ಭೋವಿ ಸಮಾಜದ ಮುಖಂಡರರು ಉಪಸ್ಥಿತಿರಿದ್ದರು.