ಈರಣ್ಣ ಪತ್ತೇಪೂರ ಅವರ ಸೇವೆ ಚಾಲಕರಿಗೆ ಮಾದರಿ:ಭೋವಿ

ತಾಳಿಕೋಟೆ:ಮೇ.1: ಮಾಡುವ ಕೆಲಸದಲ್ಲಿ ಶ್ರದ್ದೆ ಎಂಬುದು ಅಡಗಿದ್ದರೆ ಮಾಡಿದ ಕೆಲಸಕ್ಕೆ ಮತ್ತು ವ್ಯಕ್ತಿಗೆ ಗೌರವವೆಂಬುದು ತಾನಾಗಿಯೇ ಹುಡುಕಿಕೊಂಡು ಬರಲಿದೆ ಅಂತಹ ಚಾಲಕ ವೃತ್ತಿಯಲ್ಲಿ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕ ಸೇವೆ ಸಲ್ಲಿಸಿದ ಈರಣ್ಣ ಪತ್ತೇಪೂರ ಅವರ ಸೇವೆ ಚಾಲಕರಿಗೆ ಮಾದರಿಯಾಗಿದೆ ಎಂದು ತಾಳಿಕೋಟೆ ಬಸ್ ಘಟಕದ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಅವರು ಹೇಳಿದರು.
ಪಟ್ಟಣದ ಬಸ್ ಘಟಕದಲ್ಲಿ ಬಸ್ ಚಾಲಕರಾಗಿ 32 ವರ್ಷ ಸುದಿರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿಹೊಂದಿದ ಈರಣ್ಣ ಪತ್ತೇಪೂರ ಅವರ ಕುರಿತು ಬಸ್ ಘಟಕದ ಸಿಬ್ಬಂದಿಗಳ ವತಿಯಿಂದ ಆಯೋಜಿಸಲಾದ ಸನ್ಮಾನ ಗೌರವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಈರಣ್ಣ ಪತ್ತೇಪೂರ ಅವರು 1992 ರಲ್ಲಿ ತಾಳಿಕೋಟೆ ಬಸ್ ಘಟಕ ಪ್ರಾರಂಭ ಹಂತದಿಂದಲೂ ಚಾಲಕರಾಗಿ ಇಲ್ಲಿಯೇ ಸೇವೆ ಸಲ್ಲಿಸಿದ್ದಾರೆ ಅವರು ಸೇವೆ ಸಲ್ಲಿಸುವಾಗ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಸರ್ಕಾರವು ಉತ್ತಮ ಚಾಲಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ 32 ವರ್ಷದ ಚಾಲಕ ವೃತ್ತಿಯಲ್ಲಿ ಅಪಘಾತ ರಹೀತವಾದ ಬಸ್ ಚಾಲನೆ ಮಾಡಿರುವದು ಉತ್ತಮ ಸೇವೆಯಾಗಿದೆ ಮತ್ತು ಅವರು ಪ್ರಯಾಣಿಕರೊಂದಿಗೆ ಬಸ್ ಘಟಕದ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದುವದರೊಂದಿಗೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಸರ್ಕಾರದ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದುವದು ಸಹಜವಾಗಿದೆ ಅವರ ಉತ್ತಮ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಇದೇ ಸಮಯದಲ್ಲಿ ಬಸ್ ಘಟಕದ ವತಿಯಿಂದ ಮತ್ತು ನೌಕರರ ಕೂಟ ಹಾಗೂ ಎನ್‍ಟಿಸಿ ಸಂಘಟನೆಯ ವತಿಯಿಂದ ಈರಣ್ಣ ಪತ್ತೇಪೂರ ಹಾಗೂ ಧರ್ಮ ಪತ್ನಿ ಶ್ರೀಮತಿ ಪಾರ್ವತಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಅಧಿಕಾರಿಗಳಾದ ರಮೇಶ ತಾಳಿಕೋಟಿ, ನಿಂಗನಗೌಡ ಬಿರಾದಾರ, ಸುಭಾಸಚಂದ್ರ ಆಲ್ಯಾಳ, ಶ್ರೀಮತಿ ಬಸಮ್ಮ ಬಿರಾದಾರ, ಲೆಕ್ಕ ಪರಿಶೋದಕ ಅಧಿಕಾರಿ ಬಸನಗೌಡ ಚೋಕ್ಕಾವಿ, ಮುಖಂಡರುಗಳಾದ ಪದ್ಮರಾಜ ಧನಪಾಲ, ವಜ್ರಕುಮಾರ ಪ್ರಥಮಶೆಟ್ಟಿ, ನಾಸರ ಶಾಪೂರ, ತಮ್ಮಣ್ಣ ದೇಶಪಾಂಡೆ, ಸಂಘಟನೆಯ ಮುಖಂಡರುಗಳಾದ ಮಹಾಂತಗೌಡ ಬಿರಾದಾರ, ಮಲ್ಲಿಕಾರ್ಜುನ ಇಟಗಿ, ರಾಜಕುಮಾರ ಹಚಡದ, ಬಾಬು ಇಂಚಗೇರಿ, ಎಸ್.ಬಿ.ಅಸ್ಕಿ, ಎಸ್.ಬಿ.ಮೇಟಿ, ಎಚ್.ಎ.ಹಾದಿಮನಿ, ಕೆ.ಎಸ್.ಅಸ್ಕಿ, ಜಿ.ಜಿ.ಬಿರಾದಾರ, ಶಾಂತಪ್ಪ ಅಗಸರ, ಅರ್ಜುನ ಕೊಂಗಿ, ಎಂ.ಎಂ.ಚಲವಾದಿ, ಶರಣಪ್ಪ ಲಿಂಗಪ್ಪ, ಗಣಾಚಾರಿ, ಮೊದಲಾದವರು ಉಪಸ್ಥಿತರಿದ್ದರು.