ಈದ್-ಮೀಲಾದ್ ಸಾಂಸ್ಕøತಿಕ ಕಾರ್ಯಕ್ರಮ ಮಾಡುವಂತಿಲ್ಲ: ಪಾಟೀಲ್

ವಾಡಿ:ಅ.29: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ನಿಯಮಗಳಿಗೆ ಬದ್ದವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು. ಈದ್ ಮಿಲಾದ ಹಬ್ಬದ ನಿಮಿತ್ಯವಾಗಿ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಶಹಾಬಾದ ಡಿವೈಎಸ್‍ಪಿ ವೆಂಕನಗೌಡ ಪಾಟೀಲ ಹೇಳಿದರು.

ಪಟ್ಟಣದ ವಾಡಿ ಪೋಲೀಸ್ ಠಾಣೆಯಲ್ಲಿ ಈದ್-ಮೀಲಾದ್-ಉನ್ ನಬೀ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಕೊರೊನಾ ರೋಗ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದ್ದು, ಜನಸಂದಣಿ ಸೇರದಂತೆ ಹಬ್ಬ ಆಚರಿಸಬೇಕು. ಧಾರ್ಮಿಕವಾಗಿ ಆಚರಿಸುವ ಯಾವುದೇ ಸಭೆ ಸಮಾರಂಭವನ್ನು ಹಮ್ಮಿಕೊಳ್ಳುವಂತಿಲ್ಲ. ಡಿಜೆಗಳನ್ನು ಕೂಡಾ ನಿಷೇಧಿಸಲಾಗಿದೆ. ನಮಾಜ ಮಾಡುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬೇಕೆಂದು ತಿಳಿಸಿದರು.

ಪಿಎಸ್‍ಐ ವಿಜಯಕುಮಾರ ಬಾವಗಿ ಮಾತನಾಡಿ, ಕೊವೀಡ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಆದೇಶಗಳನ್ನು ನೀಡುತ್ತಿದ್ದು, ಅದನ್ನು ಪಾಲಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಕಾನೂನು ಉಲಂಘನೆ ಮಾಡಿದರೆ, ಕಠೀಣ ಶಿಕ್ಷೆ ನೀಡಲಾಗುವುದು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಬಾರದೆಂದು ತಿಳಿಸಿದರು.

ಮುಸ್ಲಿಂ ಸಮಾಜದ ಮುಖಂಡ ಬಾಬುಮಿಯ್ಯಾ ಮಾತನಾಡಿದರು. ಮುಖಂಡರಾದ ಫೀರೋಜ ಖಾನ್, ಮಹಮ್ಮದ ಅಶ್ರಫಖಾನ, ನಾಸೀರ ಹುಸೇನ, ರಾಜಾಪಟೇಲ, ಮಹಮ್ಮದ ಗೌಸ್, ಅಲ್ತಾಫ ಸೌದಾಗರ, ಚಾಂದಮಿಯ್ಯಾ ಸೇರಿದಂತೆ ಇನ್ನಿತರು ಇದ್ದರು. ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ದತ್ತು ಜಾನೆ, ಮಧುಕರ ಇದ್ದರು.