ಸಿಂಧನೂರು,ಸೆ.೨೮ – ಸಿಂಧನೂರು ನಗರ ಸೇರಿದಂತೆ ತಾಲ್ಲೂಕಿನಾಧ್ಯಂತ ಈದ್ ಮಿಲಾದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ನೂರಾನಿ ಮಸ್ಜಿದ್‌ನಲ್ಲಿ ಮಹದ್ ಪೈಗಂಬರರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಇಲಕಲ್ ಮಹಾಂತ ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕಿನಲ್ಲಿ ಅರಿವಿನ ಕೊರತೆ ಕಡಿಮೆಯಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಜ್ಞಾನ ಎದ್ದು ಕುಣಿಯುತ್ತಿದೆ. ಪ್ರತಿಯೊಬ್ಬರು ಧರ್ಮಗಳ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಪ್ರವಾದಿಯವರ ಸಂದೇಶಗಳನ್ನು ಅರ್ಥ ಮಾಡಿಕೊಂಡು ಸಹೋದರತೆಯಿಂದ ಜೀವನ ಮಾಡಬೇಕೆಂದರು.
ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿ, ಪ್ರವಾದಿ ಜೀವನವನ್ನು ತಿಳಿದುಕೊಂಡು ಮುಂದಿನ ಪೀಳಿಗೆಗೆ ಸಂದೇಶ ಕೊಡುವ ಕೆಲಸ ಮಾಡಬೇಕು. ಎಲ್ಲ ಧರ್ಮಗಳ ಹಬ್ಬಗಳಲ್ಲಿ ಎಲ್ಲಾ ಸಮಾಜದವರು ಪಾಲ್ಗೊಂಡು ಎಲ್ಲರೂ ಒಂದೇ ಎನ್ನುವ ಸಂದೇಶ ರವಾನಿಸಬೇಕಿದೆ ಎಂದರು.
ಹಿರಿಯ ಮುಖಂಡ ವೆಂಕಣ್ಣ ಆಚಾರ್ ಜೋಷಿ, ಜಿ.ಪಂ. ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಎನ್.ಶಿವನಗೌಡ ಗೊರೇಬಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ರಾಜಶೇಖರ, ಸೈಯದ್ ಬಾಬರ್‌ಪಾಷಾ ವಕೀಲ, ಖಾಜಿ ಮಲಿಕ್ ವಕೀಲ, ಸೈಯದ್ ಆಬೀದ್‌ಖಾದ್ರಿ, ಸೈಯದ್ ಹಾರೂನ್‌ಸಾಹೇಬ್ ಜಾಹಗೀರ್‌ದಾರ್, ಮುರ್ತುಜಾ ಹುಸೇನ್, ಅಬ್ದುಲ್ ಖದೀರ್, ಮುನ್ನಾ, ಹುಸೇನ್‌ಸಾಬ್, ಖಾದರ್‌ಸುಭಾನಿ, ಹಾಜಿಮಸ್ತಾನ್, ಶಿವರಾಜ ಪಾಟೀಲ್ ಗುಂಜಳ್ಳಿ, ಹೆಚ್.ಎನ್ ಬಡಿಗೇರ್, ವೆಂಕಟೇಶ ನಾಯಕ ಸೇರಿದಂತೆ ರೋಷನ್ ಯುಥ್ ಕ್ಲಬ್ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ’ ನನ್ನ ಅರಿವಿನ ಪ್ರವಾದಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ನಗರದ ಮಹಿಬೂಬಿಯಾ ಕಾಲೋನಿ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಯುವಕರು ಮಹ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ವಿವಿಧ ಸ್ಥಬ್ಧ ಚಿತ್ರಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.