ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿಸಭೆ


ಸಿರುಗುಪ್ಪ,ಅ.27- ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಈದ್ ಮಿಲದ್ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಸಿ.ಪಿ.ಐ ಟಿ.ಆರ್.ಪವಾರ್ ಮಾತನಾಡಿ ಸರಕಾರದ ಮಾರ್ಗ ಸೂಚಿಯಂತೆ ಈದ್ ಮಿಲದ್ ಹಬ್ಬವನ್ನು ಆಚರಿಸಲಾಗುತ್ತದೆ, ಈ ಸಲ ಯಾವುದೇ ಮೆರವಣಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಮಾಜ್ ಸಲ್ಲಿದಂತೆ ಇರುವುದು, ಮಸೀದಿಯಲ್ಲಿ ನಮಾಜ್ ಮಾಡುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಯಾನಿಟರ್ ಬಳಕೆ ಮಾಡಬೇಕು, ಬ್ಯಾನರ್, ಪ್ಲಾಕ್ಸ್‍ಗಳನ್ನು ಇತರೆ ಪ್ರಚಾರ ಫಲಕಗಳನ್ನು ಅಳವಡಿಸಲು ನಗರಸಭೆಯಿಂದ ಅನುಮತಿ ಪತ್ರ ಕಡ್ಡಾಯವಾಗಿ ಪಡೆದಿರಬೇಕು, ಯಾವುದೇ ಗಲಭೆಗಳಿಗೆ ಕಾರಣವಾಗದಂತೆ ಹಬ್ಬವನ್ನು ಸರಳವಾಗಿ ಆಚರಿಸುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಪಿ.ಎಸ್.ಐ ಗಂಗಪ್ಪ ಬುರ್ಲಿ ಮತ್ತು ಮುಖಂಡರು ಇದ್ದರು.