ಈದ್ ಮಿಲಾದ್ : ಬಡವರಿಗೆ ಆಹಾರ ಪೊಟ್ಟಣ ವಿತರಣೆ

ಹೂವಿನಹಡಗಲಿ:ಅ.31. ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನವಾಗಿರುವ ಈದ್ ಮಿಲಾದ್ ಹಬ್ಬವನ್ನು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಶ್ರದ್ದಾಭಕ್ತಿಯಿಂದ ಆಚರಿಸಿದರು.
ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಖಂಡರು ಮೆರವಣಿಗೆಯನ್ನು ರದ್ದುಪಡಿಸಿ, ಸರಳವಾಗಿ ಹಬ್ಬ ಆಚರಿಸಿದರು.
ಪಟ್ಟಣದ ಬಂಗಾರಪ್ಪ ನಗರದ ನಿವಾಸಿಗಳಿಗೆ ಮುಸ್ಲಿಂ ಸಮಾಜದ ಮುಖಂಡರು ಆಹಾರ ಪೊಟ್ಟಣ ವಿತರಿಸಿದರು. ಜನಾಬ್ ಹಫೀಜ್ ಸೋಫಿಯಾನ್ ಸಖಾಫಿ ಮಹ್ಮದ್ ಪೈಗಂಬರರ ಸಂದೇಶಗಳನ್ನು ತಿಳಿಸಿದರು. ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಎಂ.ಪರಮೇಶ್ವರಪ್ಪ, ಅಟವಾಳಗಿ ಕೊಟ್ರೇಶ, ಬಸವನಗೌಡ ಪಾಟೀಲ್, ಬಿ.ಹನುಮಂತಪ್ಪ, ಜಾಸ್ತಿ ಶ್ರೀನಿವಾಸ ರೆಡ್ಡಿ, ದೀಪದ ಕೃಷ್ಣಪ್ಪ, ಟಿ.ಮಹಾಂತೇಶ, ಸ್ವಾಮಿ ಹೊಳಗುಂದಿ ಇದ್ದರು.
ಪಟ್ಟಣದ ಎಂ.ಪಿ.ಪ್ರಕಾಶ ನಗರದ ಮಸೀದಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಆಚರಣೆಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಭಾಗವಹಿಸಿ, ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.