ಈದ್ ಮಿಲಾದ್ ಅಂಗವಾಗಿ ರಕ್ತದಾನ ಶಿಬಿರ

ಸಿರವಾರ.ಅ.೩೦-ಪ್ರತಿಯೊಬ್ಬ ಆರೋಗ್ಯವಂತ ಸ್ತ್ರೀ-ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗುತ್ತದೆ. ಹೊಸ ರಕ್ತ ಚಾಲನೆಯಿಂದ ಕಾರ್ಯತತ್ಪರತೆ ಜ್ಞಾಪಕ ಶಕ್ತಿ ಹೆಚ್ಚಾಗಿ, ಕೊಬ್ಬಿನಾಂಶ ಕಡಿಮೆಯಾಗಿ ರಕ್ತದ ಒತ್ತಡ ಇನ್ನಿತರ ಕಾಯಿಲೆಗಳಿಂದ ದೂರವಾಗಿ ಆರೋಗ್ಯ ಚೆನ್ನಾಗಿರುತ್ತದೆ ಎಂದು ರಾಯಚೂರು ರಕ್ತ ನಿಧಿ ಕೇಂಧ್ರದ ವೈದ್ಯಾಧಿಕಾರಿ ಡಾ.ಗುರುರಾಜ ಹೇಳಿದರು.
ಈದ್ ಮಿಲಾದ್ ಅಂಗವಾಗಿ ಅಂಜುಮಾನ್ ಕಮಿಟಿ ಹಾಗೂ ಮುಸ್ಲಿಂ ಬಾಂಧವರಿಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು ಅಪಘಾತ,ತುರ್ತು ಶಸ್ತ್ರ ಚಿಕಿತ್ಸೆಗಳ ಸಂದರ್ಭಗಳಲ್ಲಿ, ಗರ್ಭೀಣಿ ಸ್ತ್ರೀಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಾಜ್ಯದಲ್ಲಿ ಒಂದು ದಿನಕ್ಕೆ ಅಂದಾಜು ೮೦೦ ರಿಂದ ೧೧೦೦ ಯುನಿಟ್‌ಗಳಷ್ಟು ರಕ್ತದ ಬೇಡಿಕೆ ಇದೇ, ಆದರೆ ಶೇ. ೮೦% ಮಾತ್ರ ರಕ್ತ ಪೂರೈಕೆಯಾಗುತ್ತಿದೆ. ಕೊವೀಡ್-೧೯ ವೈರಸ್ ಬಂದಾಗಿನಿಂದಲೂ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಯುವಕರು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಇತ್ತರರಿಗೆ ಮಾದರಿಯಾಗಿ ಎಂದರು.
ಆಯುಷ್ಯವೈಧ್ಯಾಧಿಕಾರಿ ಡಾ.ಸುನೀಲ್ ಸರೋದೆ ಮಾತನಾಡಿ ರಕ್ತದಾನ ಮಾಡಿದ ಕೆಲವೇ ಕ್ಷಣದಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ ೨೪ ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದಲ್ಲಿ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. ಕೊವೀಡ್ ೧೯ ನಿಂದಾಗಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದ್ದೂ, ಇಂತಹ ಸಂದರ್ಭದಲ್ಲಿ ಮುಸ್ಲಿಂ ಭಾಂಧವರು ಹಬ್ಬದ ಅಂಗವಾಗಿ ರಕ್ತದಾನ ಮಾಡುತ್ತಿರುವುದು ಸಂತೋಷದ ವಿಷಯ. ಮುಸ್ಲಿಂ ಬಾಂಧವರು ವರ್ಷದಲ್ಲಿ ೨ ಬಾರಿ ರಕ್ತದಾನವನ್ನು ಮಾಡಿ ಆರೋಗ್ಯ, ಆಯುಷ್ಯ ವೃದ್ದಿಸಿಕೊಳ್ಳಿ ಎಂದರು.
ಹಸೇನ ಅಲಿ, ಮಹಿಬೂಬ್ ಸಾಬ್ ದೊಡ್ಮನೆ, ಅಂಜುಮಾನ್ ಕಮಿಟಿಯ ಕಮಿಟಿ ಅಧ್ಯಕ್ಷ ವಲಿಸಾಬ್ ಗುತ್ತೆದಾರ, ಸತ್ತರ ಸಾಬ್, ಹಾಜಿಚೌದ್ರಿ, ಇಬ್ರಾಹಿಂ, ಅಜುಮುದ್ದಿನ್, ಶಮ್ಮು ಕಾಶ್ಮೀರಿ, ಅಜ್ಮೀರಿ ಸೈಕಲ್ ಶಾಪ್, ಡಾ.ಪ್ರವೀಣ್, ಡಾ.ಅದಿತಿ, ಶಿವನಗೌಡ, ಭೀಮಾಶಂಕರ ಬೈಲೂರು, ವಿರೇಶ ಜಿ, ನಾಗೇಂಧ್ರ, ವಿರುಪಾಕ್ಷಪ್ಪ, ಮಲ್ಲಿಕಾರ್ಜುನ, ಮುತ್ತಣ್ಣ, ರಾಜೇಶ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.