ಈದ್ಗಾ ವಿವಾದ ಶೀಘ್ರ ಇತ್ಯರ್ಥ

ಬೆಂಗಳೂರು, ಜು.೨೭- ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವೂ ಆಗಷ್ಟ್೧೫ ರೊಳಗೆ ಇತ್ಯರ್ಥ ವಾಗುವ ವಿಶ್ವಾಸ ಇದ್ದು, ಈ ಬಾರಿ ಅಲ್ಲಿಯೂ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದ ಖಾತೆ ವರ್ಗಾವಣೆ ಇನ್ನೂ ಬಾಕಿ ಇದೆ.
ಈ ವಾರದ ಅಂತ್ಯಕ್ಕೆ ನೀಡಿದ್ದ ಗಡುವು ಅಂತ್ಯವಾಗುತ್ತೆ.ಆನಂತರ, ಜಂಟಿ ಆಯುಕ್ತರು ಅಂತಿಮ ಆದೇಶವನ್ನು ನೀಡುತ್ತಾರೆ ಎಂದರು.
ಫೀರ್ ಪೌಂಡ್ರಿ ಮಸೀದಿ ಬಿಟ್ಟು ಉಳಿದ ಜಾಗ ದಲ್ಲಿ ಬೇಲಿ ಹಾಕುತ್ತೇವೆ. ಈಗಾಗಲೇ ಬೇಲಿ ಗುರುತು ಮಾಡಲಿದ್ದು, ಇದಕ್ಕಾಗಿ
ಏಜೆನ್ಸಿಯನ್ನು ನೇಮಕ ಮಾಡಲಿದ್ದೇವೆ. ಮತ್ತೊಂದೆಡೆ ಖಾತೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಅದರ ಪ್ರಕ್ರಿಯೆ ನಡೆಯುತ್ತಿದೆ. ೪೫ ದಿನಗಳ ಸಮಯಾವಕಾಶ ನೀಡಲಾಗಿತ್ತು.ಈ ವಾರದ ಕೊನೆಗೆ ಅವರಿಗೆ ನೀಡಿರುವ ಕಾಲಾವಕಾಶ ಮುಕ್ತಾಯ ಆಗುತ್ತದೆ ಎಂದರು.
ಈ ಬಾರಿ ರಾಷ್ಟ್ರ ಧ್ವಜ ಎಲ್ಲ ಕಡೆ ಹಾರಿಸಲಾಗುತ್ತೆ.ಅದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಎಂದ ಅವರು, ರಾಷ್ಟ್ರ ಧ್ವಜ ಎಲ್ಲೇಡೆ ಹಾರಾಡಬೇಕು ಎನ್ನುವ ಆದೇಶ ಇದೆ. ಈದ್ಗಾ ಮೈದಾನ ವಿಚಾರದಲ್ಲಿಯೂ ರಾಷ್ಟ್ರ ಧ್ವಜ ಹಾರಾಟಕ್ಕೂ ಹಕ್ಕುದಾರರು ಯಾರು ಎನ್ನುವ ಪ್ರಶ್ನೆಗೂ ಯಾವುದೆ ಸಂಬಂಧ ಇಲ್ಲ ಎಂದು ಹೇಳಿದರು.