ಈದ್ಗಾ ಇತ್ಯರ್ಥಕ್ಕೆ ಪಾಲಿಕೆಗೆ ಸೂಚನೆ

ಬೆಂಗಳೂರು, ಜು.೨೫- ಚಾಮರಾಜಪೇಟೆ ಈದ್ಗಾ ಮೈದಾನ ಸಂಬಂಧ ಉಂಟಾಗಿರುವ ವಿವಾದ ಕುರಿತು ಸೂಕ್ತ ಬಗೆಹರಿಸುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬಿಬಿಎಂಪಿ ಜಂಟಿ ಆಯುಕ್ತರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಚಾಮರಾಜಪೇಟೆ ನಾಗರೀಕರು ಒಕ್ಕೂಟದ ಪ್ರಮುಖರು ಪ್ರಧಾನಿ ಕಚೇರಿ ಹಾಗೂ ರಾಜ್ಯ ಸರ್ಕಾರಕ್ಕೆ ಇಮೇಲ್ ಮೂಲಕ ಕೂಡಲೆ ಚಾಮರಾಜಪೇಟೆ ಸಮಸ್ಯೆ ಇತ್ಯರ್ಥ ಮಾಡುವಂತೆ ಆಗ್ರಹಿಸಿದ್ದಾರೆ.
ಹೀಗಾಗಿ, ಒಕ್ಕೂಟದ ಮನವಿ ಹಿನ್ನಲೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮೇಲ್ ಹಾಕಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕೂಡಲೆ ಚಾಮರಾಜಪೇಟೆ ಸಮಸ್ಯೆ ಇತ್ಯರ್ಥ ಮಾಡುವಂತೆ ಜಂಟಿ ಆಯುಕ್ತ ಶ್ರೀನಿವಾಸ್ ಗೆ ಸೂಚಿಸಿದ್ದಾರೆ.
ಇನ್ನೂ, ರಕ್ತ ಕೊಟ್ಟೆವು ಮೈದಾನ ಬಿಡೆವು ಎಂಬ ಹೋರಾಟ ನಡೆಸಲು ರಕ್ತದಾನ ಅಭಿಯಾನಕ್ಕೆ ಒಕ್ಕೂಟ ನಿರ್ಧಾರ ಮಾಡಿದ್ದು, ರಕ್ತದಾನ ಅಭಿಯಾನದಲ್ಲಿ ಚಾಮರಾಜ ಪೇಟೆಯ ಸಾವಿರಾರು ನಾಗರೀಕರು ಭಾಗಿಯಾಗುವ ಸಾಧ್ಯತೆ ಇದೆ.