ಈಡೇರದ ಭರವಶೆ ಕುಡುತಿನಿಯಲ್ಲಿ ರೈತರ ಧರಣಿ 85 ನೇ ದಿನಕ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,12- ತಾಲೂಕಿನ ಕುಡತಿನಿ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಹೋರಾಟ 85 ದಿನಕ್ಕೆ ಕಾಲಿಟ್ಟಿದೆ. ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್ ಎಂಡಸಿ ಪಂಕನಿಗಳಿಗೆ ವಶಪಡಿಸಿಕೊಂಡ 12500 ಎಕರೆ ಭೂಮಿಯಲ್ಲಿ ಅತ್ತ ಕಾರ್ಖಾನೆಗಳನ್ನು ಸ್ಥಾಪಿಸಿದೇ, ಇತ್ತ  ಉದ್ಯೋಗ ನೀಡದೇ, 13 ವರ್ಷ ಕಳೆದಿದೆ.
ಕೂಡಲೇ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ನಮ್ಮ ಜಮೀನುಗಳನ್ನು ನಮಗೆ ವಾಪಸ್ಸು ನೀಡಿ ಎಂದು ಆಗ್ರಹಿಸಿ ಈ ಹೋರಾಟ ನಡೆಯುತ್ತಿದೆ.
ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ  ಬಿ.ಶ್ರೀರಾಮು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೋರಾಟ ನಿರತ ರೈತರ ಸ್ಥಳಕ್ಕೆ ಭೇಟಿ ಮಾಡಿ ವಿವಿಧ ಭರವಸೆಗಳನ್ನು ನೀಡಿ ಹೋಗಿ 40 ದಿನಗಳು ಕಳೆದಿವೆ.
ಆದರೆ ಭರವಸೆಗಳು ಭರವಶೆಗಳಾಗಿಯೇ ಇವೆ.  ಅದೇರೀತಿ ರೈತರು ಅಧಿವೇಶನದ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ಆರ್, ನಿರಾಣಿ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೊಡಗಿಕೊಂಡರೂ ರೈತರ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ.
ಸಂಸದ ವೈ.ದೇವೇಂದ್ರಪ್ಪ  ರೈತರ ಸಮಸ್ಯೆ ಆಲಿಸಲು ಬಾರದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ, ರೈತ ಮುಖಂಡ  ಎಂ. ನಾಗದೇವ ಇಂದು ಮಾತನಾಡಿ ನಮ್ಮ ಜನಪ್ರತಿನಿಧಿಗಳು ರೈತರ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ, ಅದಕ್ಕೆ ಸಂಸದ ದೇವೇಂದ್ರಪ್ಪ ನವರು ಉದಾಹರಣೆ. ಇಂತಹ ಮನೋಭಾವದಿಂದ ಹೊರ ಬಂದು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ರೈತರ ಸಮಸ್ಯೆಗಳನ್ನು ಆಲಿಸಿ ಬಗೆರಿಸುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರು ರೈತರ ಈ ನ್ಯಾಯಯುತ ಬೇಡಿಕೆ ಶೀಘ್ರವಾಗಿ ಈಡೇರಿಸಬೇಕೆಂದರು. ಸರ್ಕಾರದ ನಿಲರ್ಕ್ಷ ಧೋರಣೆ ವಿರುದ್ದ ಘೋಷಣೆ ಕೂಗಿದರು.
ಹೋರಾಟದಲ್ಲಿ ಗೋನೂರು ಅಂಜಿನಪ್ಪ. ಪಿಂಜಾರ್ ಮೌಲಾಸಾಬ್. ಬನ್ನಿಹಟ್ಟಿ ರಾಮಾಂಜಿನಪ್ಪ. ಹೋಳಿಗೆ ರಾಮಣ್ಣ. ದಾಸರ ವೀರಪ್ಪ. ಶೇಖರ್. ಲಕ್ಷ್ಮಣ. ಜಗ್ಗ ಮಲ್ಲಿಕಾರ್ಜುನ. ಬನ್ನಿಹಟ್ಟಿ ದೊಡ್ಡಬಸಪ್ಪ. ಕಾಮೇಶ್
ಬಳ್ಳಾರಿ ಶಂಕ್ರಪ್ಪ. ಜಾನೆ ಕುಂಟೆ ದೊಡ್ಡಬಸಪ್ಪ. ಜಾನೇಕುಂಟೆ ಕುರುಬರ ದೊಡ್ಡಬಸಪ್ಪ. ಜಾನೆ ಕುಂಟೆ ನಂದ್ವಾರಪ್ಪ. ತಗ್ಗಿನಮನೆ ವೀರೇಶ್. ಕುರುಬರ ತಾಯಪ್ಪ. ಸಿಪಿಐಎಂ ಹನುಮಯ್ಯ. ಚೆಲುವಾದಿ ವೀರೇಶ್. ವೇಣಿ ವೀರಾಪುರ ಸತೀಶ್ ಚಂದ್ರರೆಡ್ಡಿ. ಢಮಣಿ ಕುಮಾರಪ್ಪ. ಎಂಪಿ ತಿಮ್ಮಪ್ಪ. ಧರ್ಮಕ್ಕ .ಹುಲಿಗೆಮ್ಮ. ಹನುಮಕ್ಕ. ಎಣ್ಣೆ ಪಂಪಣ್ಣ. ರಾಮಾಂಜನಿ .ರವಿ. ಮೊದಲಾದ ರೈತರು ಭಾಗವಹಿಸಿದ್ದರು.